ಪಿಎಫ್ಐ ಅಂಗರಗುಂಡಿ ವಲಯ ವತಿಯಿಂದ ರಕ್ತದಾನ ಶಿಬಿರ
ಮಂಗಳೂರು : ಅಂಗರಗುಂಡಿ ಹಾಗು ಕೆಎಂಸಿ ಆಸ್ಪತ್ರೆ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ ನಡೆಯಿತು.
ಪಿಎಫ್ಐ ಅಂಗರಗುಂಡಿ ವಲಯಾಧ್ಯಕ್ಷ ಸಮೀರ್ ವಿಬಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆಎಂಸಿ ಆಸ್ಪತ್ರೆ ಮಂಗಳೂರು ಇದರ ಬ್ಲಡ್ ಬ್ಯಾಂಕ್ ನ ವೈದ್ಯರಾದ ಡಾ. ಹರ್ಷ ಕುಮಾರ್ ರಕ್ತದಾನದ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಊರಿನ ಸಮಾಜ ಸೇವಕರಾದ ಇಲ್ಯಾಸ್ ಅಂಗರಗುಂಡಿ, ಬಶೀರ್ ಅಂಗರಗುಂಡಿ ಹಾಗು ಆಶಾ ಕಾರ್ಯಕರ್ತೆ ಆಯಿಷಾ ಫಾರೂಕ್ ರವರಿಗೆ ಪಿಎಫ್ಐ ಅಂಗರಗುಂಡಿ ವಲಯದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬದ್ರಿಯಾ ಮಸೀದಿ ಅಂಗರಗುಂಡಿ ಇದರ ಅಧ್ಯಕ್ಷರಾದ ಅಡ್ವಕೇಟ್ ಮುಕ್ತಾರ್ ಅಹ್ಮದ್, ಕಾರ್ಯದರ್ಶಿ ಗಫೂರ್, ಪಿಎಫ್ಐ ಕಾವೂರು ಡಿವಿಷನ್ ಅಧ್ಯಕ್ಷರಾದ ದಾವೂದ್ ಇಮ್ರಾಝ್ ಪೊರ್ಕೊಡಿ, ಊರಿನ ಹಿರಿಯರಾದ ಆಥಿಮಾಕ, ಬಾವ ಅಂಗರಗುಂಡಿ, ಹಾಗು ಅಂಗರಗುಂಡಿ ಯುವ ಮುಂದಾಳು ಶರಫ್ ಅಂಗರಗುಂಡಿ, ಮುಹ್ಯಿದ್ದೀನ್ ಜುಮಾ ಮಸೀದಿ ಕಾರ್ಯದರ್ಶಿ ಸಮೀರ್ ಅಂಗರಗುಂಡಿ, ಪಿಎಫ್ಐ ಜಿಲ್ಲಾ ಕಾರ್ಯದರ್ಶಿ ನವಾಝ್ ಕಾವೂರು, ಜಿಲ್ಲಾ ಮೆಡಿಕಲ್ ಉಸ್ತುವಾರಿ ಇಲ್ಯಾಸ್ ಬಜಪೆ ಮುಂತಾದವರು ಭಾಗವಹಿಸಿದ್ದರು.
ರಕ್ತದಾನ ಶಿಬಿರದಲ್ಲಿ ಒಟ್ಟು 65 ಯುನಿಟ್ ರಕ್ತ ಸಂಗ್ರಹಿಸಲಾಯಿತು. ಇಸ್ಮಾಯಿಲ್ ಶಾಫಿ ಅಂಗರಗುಂಡಿ ಸ್ವಾಗತಿಸಿದರು, ಅಸ್ಲ ಅಂಗರಗುಂಡಿ ಕಾರ್ಯಕ್ರಮ ನಿರೂಪಿಸಿದರು.