×
Ad

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ; ಕನ್ನಡಿಗರೆ ಹೆಮ್ಮೆ-ಕಸಾಪ ಅಧ್ಯಕ್ಷ ಶಂಕರ್ ನಾಯ್ಕ

Update: 2020-11-01 22:21 IST

ಭಟ್ಕಳ : ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕಿರುವುದು ಕನ್ನಡಿಗರೆ ಹೆಮ್ಮೆಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ನ್ಯಾಯವಾದಿ ಶಂಕರ ನಾಯ್ಕ ಹೇಳಿದರು.

ಅವರು ರವಿವಾರ ತಾಲೂಕು ಆಡಳಿತ ಹಮ್ಮಿಕೊಂಡ ೬೫ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಕನ್ನಡ ಬಾಷೆಗೆ 2500 ಸಾವಿರ ವರ್ಷದ ಇತಿಹಾಸವಿದೆ. ಕನ್ನಡ ಬಾಷೆಗೆ ಅತಿ ಹೆಚ್ಚು ಜ್ನಾನಪೀಠ ಪ್ರಶಸ್ತಿ ದೊರೆತಿದೆ, ಕನ್ನಡ ನಾಡಿದಲ್ಲಿ ಅನೇಕ ಹಿರಿಯರು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ, ಇವರ ಕೊಡುಗೆಯಿಂದ ಕನ್ನಡ ನಾಡು ಶ್ರೀಮಂತವಾಗಿದೆ ಕನ್ನಡವನ್ನು ಉಳಿಸಲು ಹಾಗೂ ಬೆಳೆಸಲು ನಾವೆಲ್ಲರೂ ಪ್ರಯತ್ನಿಸಿ ಕನ್ನಡ ಸಂಸ್ಕತಿಯನ್ನು ಉಳಿಸಲು ಕಾರಣೀಕರ್ತರಾಗಬೇಕು. ತಾಲೂಕಿನ ಎಲ್ಲಾ ವಿದ್ಯಾಸಂಸ್ಥೆಗಳು ಪಠ್ಯೇತ್ಯರ ಚಟುವಟಿಕೆಗಳಲ್ಲಿ ನಮ್ಮ ಸಂಸ್ಕೃತಿ,ಯನ್ನು, ನಮ್ಮ ಕಲೆಯನ್ನು .ನಮ್ಮ ಇತಿಹಾಸವನ್ನು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವವ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಉಪ ವಿಭಾಗಾಧಿಕಾರಿ.ಎಸ್.ಭರತ, ಕನ್ನಡ ಬಾಷೆ, ಕನ್ನಡ ನಾಡಿಗಾಗಿ ಅನೇಕ ಗಣ್ಯರು ದುಡಿದಿದ್ದಾರೆ ಅವರೆಲ್ಲರ ಶ್ರಮವನ್ನು ನೆನಸಿಕೊಳ್ಳಬೇಕಾಗಿದೆ ಎಂದರು.

ಸಂಗೀತ,ಜಾನಪದ ಕಲೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಈಶ್ವರ ಹಕ್ರೆ, ಕವಿ ಮಂಜುನಾಥ ನಾಯ್ಕ ಸರ್ಪನಕಟ್ಟೆ, ನಾರಾಯಣ ಮದ್ಯಸ್ಥ, ಹಾಗೂ ದಾಮೋದರ ಗೊಂಡ ಇವರನ್ನು ತಾಲೂಕು ಆಡಳಿತದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ 2019-20ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಪುರಸ್ಕರಿಸಲಾಯಿತು.

ವೇದಿಕೆಯಲ್ಲಿ ಎ.ಎಸ್.ಪಿ, ನಿಖಿಲ್,ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ತಹಶಿಲ್ದಾರ ರವಿಚಂದ್ರ, ಎ.ಸಿ.ಎಫ್ ಸುದರ್ಶನ, ಪುರಸಭೆ ಮುಖ್ಯಾಧಿಕಾರಿ ದೇವರಾಜು,ಅಜಯ್ ಭಂಡಾರಕರ್ ಇದ್ದರು. ತಹಶಿಲ್ದಾರ ರವಿಚಂದ್ರ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News