×
Ad

ಹೊಟೇಲ್ ಮೋತಿಮಹಲ್: ಗ್ರೇಟ್ ಇಂಡಿಯನ್ ಫೆಸ್ಟಿವಲ್ ಗಾರ್ಮೆಂಟ್ ಸೇಲ್

Update: 2020-11-01 23:21 IST

ಮಂಗಳೂರು, ನ.1: ನಗರದ ಫಳ್ನೀರ್ ರಸ್ತೆಯಲ್ಲಿರುವ ಹೊಟೇಲ್ ಮೋತಿಮಹಲ್‌ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಗಾರ್ಮೆಂಟ್ಸ್‌ನ ಪ್ರದರ್ಶನ ಮಾರಾಟ ನಡೆಯುತ್ತಿದ್ದು, ಗ್ರಾಹಕರಿಗೆ ನ.3ರವರೆಗೆ ಮಾತ್ರ ಖರೀದಿಗೆ ಅವಕಾಶ ನೀಡಲಾಗಿದೆ.

ಕಳೆದ ಕೊರೋನ ಮಹಾಮಾರಿ ಕಾರಣದಿಂದ ಲಾಕ್‌ಡೌನ್ ಸಂದರ್ಭದಲ್ಲಿ ಶಾಪಿಂಗ್ ಟ್ರೆಂಡ್ ಹೆಚ್ಚಾಗಿದ್ದರಿಂದ ಸ್ಥಳೀಯ ಬಟ್ಟೆ ವ್ಯಾಪಾರಿಗಳಲು ಫ್ಯಾಕ್ಟರಿಗಳಿಂದ ಅತಿ ಕಡಿಮೆ ಪ್ರಮಾಣದ ಬಟ್ಟೆಗಳನ್ನು ಖರೀದಿಸುತ್ತಿದ್ದಾರೆ. ಇದರ ಫಲವಾಗಿ ಕೋಟ್ಯಂತರ ರೂ.ಗಳಷ್ಟು ಬೆಲೆ ಬಾಳುವ ಸರಕು ಗಳು ಫ್ಯಾಕ್ಟರಿಗಳಲ್ಲಿಯೇ ಶೇಖರಿಸಲ್ಪಟ್ಟಿವೆ. ಫ್ಯಾಕ್ಟರಿಯಲ್ಲಿನ ಎಲ್ಲ ಲೇಟೆಸ್ಟ್ ಫ್ಯಾಶನ್ ಬಟ್ಟೆಗಳು, ಲೇಡಿಸ್, ಜೆಂಟ್ಸ್ ಮತ್ತು ಮಕ್ಕಳ ಉಡುಪು ಗಳು ಕೇವಲ 200ರಿಂದ 350 ರೂ.ಗಳಲ್ಲಿ ಖರೀದಿಗೆ ಲಭ್ಯ ಇವೆ.

ಹೋಲ್‌ಸೇಲರ್ಸ್, ಸೆಮಿ ಹೋಲ್‌ಸೇಲರ್ಸ್, ಕಮಿಷನ್ ಏಜೆಂಟ್ಸ್ ಮತ್ತು ರಿಟೇಲ್ ಮಾರಾಟಗಾರರು ಈ ಮೊದಲು ಲಾಭವಾಗುತ್ತಿತ್ತು. ಸದ್ಯ ಇಡೀ ದೇಶದ ಗಾರ್ಮೆಂಟ್ಸ್ ಸಿದ್ಧಪಡಿಸುವ ಕಂಪೆನಿಗಳ ಐತಿಹಾಸಿಕ ನಿರ್ಣಯ ಕೈಗೊಂಡಿದ್ದು, ಎಲ್ಲ ಲಾಭವು ರಿಟೈಲ್ ಗ್ರಾಹಕರಿಗೆ ಸಲ್ಲಲಿದೆ.

50 ಸಾವಿರಕ್ಕೂ ಹೆಚ್ಚು ವಿವಿಧ ಪ್ರಕಾರದ ಜೆಂಟ್ಸ್, ಲೇಡಿಸ್ ಮತ್ತು ಕಿಡ್ಸ್ ಪ್ಯಾಂಟ್, ಶರ್ಟ್, ಟೀ-ಶರ್ಟ್, ಲೋವೆಸ್ಟ್, ಬರ್ಮುಡಾ, ಟಾಪ್, ಕಾಪ್ರಿ, ಲೇಡಿಸ್ ಪೈಜಾಮ, ಬಾಬಾ ಸೂಟ್, ಫ್ಯಾನ್ಸಿ ಕಿಡ್ಸ್ ಡ್ರೆಸ್, ಸಾರೀಸ್, ಕುರ್ತಿಸ್ ಹಾಗೂ ಇತರ ಬಟ್ಟೆಗಳ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ. ಗ್ರಾಹಕರು ನೇರವಾಗಿ ಮೋತಿಮಹಲ್‌ಗೆ ಭೇಟಿ ನೀಡಿ ಸುಲಭವಾಗಿ ಸಿದ್ಧ ಉಡುಪುಗಳನ್ನು ಖರೀದಿಸಬಹುದು. ಕುಟುಂಬ ಸಮೇತ ಭೇಟಿ ನೀಡುವ ಜೊತೆಗೆ ಖರೀದಿಯ ಭರಾಟೆಯ ಅನುಭವವನ್ನು ಪಡೆಯಬಹುದಾಗಿದೆ. ದಿನದಿಂದ ದಿನಕ್ಕೆ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ.

ಈ ಮಾರಾಟ ಮೇಳದಲ್ಲಿ ವಿಶೇಷ ಕೌಂಟರ್‌ನ್ನು ತೆರೆಯಲಾಗಿದ್ದು ಮಲ್ಟಿ ಬ್ರಾಂಡ್ ಡಿಸೈನರ್ ಕುರ್ತಿ, ಪ್ರಿಂಟೆಡ್ ಕುರ್ತಿ, ಪಾರ್ಟಿವೇರ್ ಕುರ್ತಿ, ಜಂಟ್ಸ್ ಬ್ರಾಂಡೆಡ್ ಶರ್ಟ್ಸ್, ಆಫೀಸ್‌ವೇರ್ ಶರ್ಟ್ಸ್, ಪಾರ್ಟಿವೇರ್ ಶರ್ಟ್ಸ್, ಫಾರ್ಮಲ್ ಶರ್ಟ್ಸ್, ಟೀ-ಶರ್ಟ್ಸ್, ಜಂಟ್ಸ್ ಲೋವರ್, ಕಾಟನ್ ಟ್ರೌಸರ್ಸ್‌, ಜೀನ್ಸ್ ಇತ್ಯಾದಿ 450 ರೂ.ನಿಂದ 599 ರೂ.ರವರೆಗೆ ಮಾರಾಟಗೊಳ್ಳುತ್ತಿದೆ.

ನೇರವಾಗಿ ಸೀರೆಯನ್ನು ಮಿಲ್ ಮುಖಾಂತರ ರಿಟೇಲ್ ಗ್ರಾಹಕರಿಗೆ ಕಾಟನ್ ಪ್ರಿಂಟ್ ಸೀರೆ, ಜಾರ್ಜೆಟ್ ಪ್ರಿಂಟೆಡ್ ಸೀರೆ, ಶಿಾನ್ ಸೀರೆ, ಇಟೇಲಿಯನ್ ಕ್ರೇಪ್ ಸೀರೆ, ಪಾರ್ಟಿವೇರ್ ಸೀರ್, ಲೈಟ್‌ವೇಟ್ ಸೀರೆ ಹಾಗೂ ರಿಚ್‌ಪಲ್ಲು ಸೀರೆ ಕೇವಲ 150ರಿಂದ 250 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಲೇಡಿಸ್ ಸ್ಪೆಷಲ್ ಅಂಡರ್ ಗಾರ್ಮೆಂಟ್ಸ್ ಕೌಂಟರ್‌ನಲ್ಲಿ ದೇಶೀಯ ಮತ್ತು ಇಂಪೋರ್ಟೆಡ್ ಬ್ರಾ, ಪ್ಯಾಂಟಿಗಳು ಕೇವಲ 50 ರೂ.ಗೆ ದೊರೆಯುತ್ತವೆ.

ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಂಸ್ಥೆಯಿಂದ ಹೊಸ ಸಿದ್ಧ ಉಡುಪುಗಳನ್ನು ಆಮದು ಮಾಡಿಕೊಳ್ಳಲಾಗಿದೆ. ವಿವಿಧ ಬಗೆಯ ನವನವೀನ ಬಟ್ಟೆ-ಬರೆ ಖರೀದಿಗೆ ಸಿದ್ಧವಾಗಿವೆ. ಗ್ರಾಹಕರು ಉಡುಪು ಖರೀದಿಗೆ ಮುಗಿಬಿದ್ದಿದ್ದು, ಈ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಳ್ಳದೇ ಇಂದೇ ಭೇಟಿ ನೀಡಬಹುದಾಗಿದೆ.

ಸರಕಾರದ ಆದೇಶದಂತೆ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಲಾಗುತ್ತಿದ್ದು ಗ್ರಾಹಕರಿಗೆ ಪ್ರಮುಖ ಡೆಬಿಟ್/ಕ್ರೆಡಿಟ್ ಕಾರ್ಡ್ಸ್, ಗೂಗಲ್ ಪೇ ಮತ್ತು ಫೋನ್ ಪೇ ಡಿಜಿಟಲ್ ಆ್ಯಪ್ ಗಳನ್ನು ಬಳಸಿ ಖರೀದಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಉಡುಪಿ ಹೊಟೇಲ್ ದುರ್ಗಾ ಇಂಟರ್‌ನ್ಯಾಶನಲ್: ಉಡುಪಿ ನಗರದ ಸಿಟಿ ಬಸ್ ನಿಲ್ದಾಣ ಸಮೀಪದ ಹೊಟೇಲ್ ದುರ್ಗಾ ಇಂಟರ್‌ನ್ಯಾಶನಲ್ ನಲ್ಲಿ ಬೃಹತ್ ರೆಡಿಮೆಡ್ ಗಾರ್ಮೆಂಟ್ಸ್‌ನ ಪ್ರದರ್ಶನ ಮಾರಾಟ ಮೇಳ ಆರಂಭವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸಿ ಖರೀದಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News