ನ. 2 : ಮುಸ್ಲಿಂ ಜಮಾಅತ್ ಉಳ್ಳಾಲ ತಾಲೂಕು ಘೋಷಣಾ ಸಮಾವೇಶ
Update: 2020-11-01 23:25 IST
ಮಂಗಳೂರು : ಕರ್ನಾಟಕ ಮುಸ್ಲಿಂ ಜಮಾಅತ್ ಸಂಘಟನೆಯ ಉಳ್ಳಾಲ ತಾಲೂಕು ಘೋಷಣಾ ಸಮಾವೇಶವು
ನ. 2ರ ಅಪರಾಹ್ನ 2ಕ್ಕೆ ಅಲ್ ಮದೀನ ಹಾಲ್ ತಿಬ್ಲೆಪದವು ನಲ್ಲಿ ನಡೆಯಲಿದೆ.
ಕಾರ್ಯಕ್ರಮ ದಲ್ಲಿ ರಾಜ್ಯ ಉಪಾಧ್ಯಕ್ಷ ಎಚ್ ಐ ಅಬೂಸುಫ್ಯಾನ್ ಮದನಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ಕೆ ಎಮ್ ಶಾಫಿ ಸ ಅದಿ ಬೆಂಗಳೂರು, ಸಂಘ ಕುಟುಂಬದ ನಾಯಕರಾದ ಪಿ ಎಂ ಉಸ್ಮಾನ್ ಸ ಅದಿ ಪಟ್ಟೋರಿ, ಡಾ ಎಮ್ಮೆಸ್ಸೆಂ ಝೈನೀ ಕಾಮಿಲ್, ಇಸ್ಮಾಯಿಲ್ ಸ ಅದಿ ಉರುಮಣೆ, ಎಸ್ ಕೆ ಖಾದರ್ ಹಾಜಿ ಮುಡಿಪು, ರಾಜ್ಯ ಕಾರ್ಯದರ್ಶಿ ಅಬ್ದುಲ್ ಹಮೀದ್ ಬಜ್ಪೆ , ಎಸ್ ವೈ ಎಸ್ ರಾಜ್ಯಾಧ್ಯಕ್ಷ. ,ಸಾದಿಖ್ ಮಾಸ್ಟರ್ ಮಲೆಬೆಟ್ಟು ಹಾಗೂ ವಿವಿಧ ಮೊಹಲ್ಲಗಳ ಗಣ್ಯ ನಾಯಕರು ಗಳು ಭಾಗವಹಿಸುವರು ಎಂದು ಜಿಲ್ಲಾ ಕೋ ಆರ್ಡಿನೇಟರ್ ಅಶ್ರಫ್ ಕಿನಾರ ತಿಳಿಸಿದ್ದಾರೆ.