×
Ad

ನಮ್ಮ ನಾಡ ಒಕ್ಕೂಟದಿಂದ ‘ಪ್ರವಾದಿ ಮುಹಮ್ಮದ್ (ಸ.) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಪುಸ್ತಕ ವಿತರಣೆ

Update: 2020-11-01 23:27 IST

ಕುಂದಾಪುರ, ನ.1: ನಮ್ಮ ನಾಡ ಒಕ್ಕೂಟ ಕುಂದಾಪುರ ಘಟಕದ ವತಿಯಿಂದ ಮಂಗಳೂರಿನ ಶಾಂತಿ ಪ್ರಕಾಶನ ಪ್ರಕಾಶನದ ‘ಪ್ರವಾದಿ ಮುಹಮ್ಮದ್ (ಸ.) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಪುಸ್ತಕವನ್ನು ಕುಂದಾಪುರದ ವೃತ್ತ ನಿರೀಕ್ಷಕ ಗೋಪಾಲಕೃಷ್ಣ, ಕುಂದಾಪುರ ಪುರಸಭೆಯ ಸದಸ್ಯಮೋಹನದಾಸ್ ಶೇಣಿ, ಕುಂದಾಪುರ ರೋಟರಿ ಕ್ಲಬ್ ಮಾಜಿ ಅಧ್ಯಕ್ಷೆ ಅಂಬುಜಾ ಎ. ಶೆಟ್ಟಿ, ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ನಾಗೇಶ್, ಡಾ.ವಿಜಯಶಂಕರ್ ಹಾಗೂ ಸಂಚಾರ ಠಾಣೆಯ ಸಿಬ್ಬಂದಿ ಸುಪ್ರೀತಾ ಶೆಟ್ಟಿಯವರಿಗೆ ವಿತರಿಸಲಾಯಿತು.

ಕುಂದಾಪುರ ನಮ್ಮ ನಾಡ ಒಕ್ಕೂಟದ ಅಧ್ಯಕ್ಷ ಹುಸೈನ್ ಹೈಕಾಡಿ, ಉಪಾಧ್ಯಕ್ಷ ಅಬ್ದುಲ್ ಅಝೀಝ್, ಕಾರ್ಯದರ್ಶಿ ಸೈಯದ್ ಮೀರ್ ಮುಹಮ್ಮದ್ ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News