ಹ್ಯಾಮಿಲ್ಟನ್‌ಗೆ 93ನೇ ಫಾರ್ಮುಲಾ ಒನ್ ಪ್ರಶಸ್ತಿ

Update: 2020-11-02 03:44 GMT

ಟರ್ಕಿ : ಖ್ಯಾತ ಫಾರ್ಮುಲಾ ವನ್ ರೇಸರ್ ಲೂವಿಸ್ ಹ್ಯಾಮಿಲ್ಟನ್ 93ನೇ ಫಾರ್ಮುಲಾ ಒನ್ ಜಯ ಸಾಧಿಸುವುದರೊಂದಿಗೆ ಮರ್ಸಿಡೆಸ್ ದಾಖಲೆ ಏಳನೇ ಬಾರಿಗೆ ಇಮೋಲಾ ಚಾಂಪಿಯನ್‌ಶಿಪ್ ಗೆದ್ದಿದೆ. ಇದರೊಂದಿಗೆ ಫೆರಾರಿಯ ಮೈಕೆಲ್ ಶುಮೇಕರ್ 1990-2000 ದಶಕಗಳಲ್ಲಿ ಸಾಧಿಸಿದ್ದ ದಾಖಲೆ ಅಳಿಸಿ ಹೋಗಿದೆ. ವಲ್ಟೇರಿ ಬೊಟ್ಟಾಸ್ ಆರಂಭದಲ್ಲಿ ಅಗ್ರರಾಗಿ ಸ್ಪರ್ಧೆ ಆರಂಭಿಸಿದರೂ, ತಾಂತ್ರಿಕ ದೋಷದಿಂದಾಗಿ ಹಿನ್ನಡೆ ಅನುಭವಿಸಿದರು.

ರೆಡ್‌ಬುಲ್‌ನ ಮ್ಯಾಕ್ಸ್ ವೆರ್ಸ್ಟೆಪೆನ್ ಹ್ಯಾಮಿಲ್ಟನ್ ಅವರನ್ನು ಆರಂಭದಲ್ಲಿ ಹಿಂದಿಕ್ಕಿದರೂ, ಹ್ಯಾಮಿಲ್ಟನ್ ನಂತರ ಬೊಟ್ಟಾಸ್ ಹಾಗೂ ವೆರ್ಸ್ಟೆಪೆನ್ ಅವರೊಂದಿಗೆ ಸಮಬಲದ ಹೋರಾಟ ನಡೆಸಿದರು. ಆದರೆ ಎಸ್ಟೆಬೆನ್ ಒಕಾನ್ ನಿವೃತ್ತಿಯಾದುದು ಹ್ಯಾಮಿಲ್ಟನ್‌ಗೆ ವರದಾನವಾಯಿತು.

ಬೊಟ್ಟಾಸ್ ಅವರನ್ನು ಹಿಂದಿಕ್ಕಿದ ವೆರ್ಸ್ಟೆಪೆನ್ ಟೈರ್‌ಪಂಚರ್‌ನಿಂದಾಗಿ ನಿವೃತ್ತರಾಗಬೇಕಾಯಿತು. ಇದರಿಂದಾಗಿ ಡೇನಿಯಲ್ ರಿಕಾರ್ಡೊ 3ನೇ ಸ್ಥಾನ ಪಡೆದು ಎರಡನೇ ಬಾರಿಗೆ ಪೋಡಿಯಂ ಫಿನಿಶ್ ಮಾಡುವಲ್ಲಿ ಯಶಸ್ವಿಯಾದರು.

ಸುರಕ್ಷಾ ಕಾರು ಅವಧಿಯಲ್ಲಿ ವೆರ್ಸ್ಟೆಪೆನ್ ಕಾರಿಗೆ ಜಾರ್ಜ್ ರಸೆಲ್ ಅವರ ಕಾರು ಢಿಕ್ಕಿ ಹೊಡೆದ ಪರಿಣಾಮ ಟೈರು ಸಿಡಿದ ಹಿನ್ನೆಲೆಯಲ್ಲಿ ವೆರ್ಸ್ಟೆಪೆನ್ ನಿವೃತ್ತರಾಗಬೇಕಾಯಿತು.

ಮರ್ಸಿಡೆಸ್ ಇದೀಗ ಸತತ ಏಳನೇ ಚಾಂಪಿಯನ್‌ಶಿಪ್ ಗೆದ್ದಿದ್ದು, ಲೂವಿಸ್ ಹ್ಯಾಮಿಲ್ಟನ್ ಟರ್ಕಿಯಲ್ಲಿ ನಡೆಯುವ 7ನೇ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಇದೆ. ಇದರೊಂದಿಗೆ ಹೈಬ್ರಿಡ್ ಯುಗದಲ್ಲಿ ಮರ್ಸಿಡೆಸ್ 100 ರೇಸ್ ಗೆದ್ದಂತಾಗಿದೆ. ಇದರೊಂದಿಗೆ ಅತ್ಯಂತ ಪ್ರಭಾವಿ ತಂಡವಾಗಿ ಮರ್ಸಿಡೆಸ್, ಇತಿಹಾಸದಲ್ಲಿ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News