×
Ad

ಅತ್ತಾವರ : ಟೌನ್ ಟೇಬಲ್ಸ್ ರೆಸ್ಟೋರೆಂಟ್ ಪುನರಾರಂಭ

Update: 2020-11-02 12:53 IST

ಮಂಗಳೂರು : ನಗರದಲ್ಲಿ ವೈವಿಧ್ಯಮಯ ಖಾದ್ಯಗಳಿಗೆ ಹೆಸರುವಾಸಿಯಾದ ಅತ್ತಾವರದ ಟೌನ್ ಟೇಬಲ್ಸ್ ರೆಸ್ಟೋರೆಂಟ್ ಮತ್ತೆ ಶುಭಾರಂಭಗೊಂಡಿದೆ.

ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಪ್ರಾರ್ಥನೆಗೈದು ಮೆನು ಬಿಡುಗಡೆಗೊಳಿಸಿದರು. ಪಂಪ್ ವೆಲ್ ತಖ್ವಾ ಮಸೀದಿಯ ಖತೀಬ್ ಹಾಫಿಝ್ ಅಬ್ದುರ್ರಹ್ಮಾನ್ ಸಖಾಫಿ, ಜಮಾಲುದ್ದೀನ್ ದಾರಿಮಿ, ಬದ್ರುದ್ದೀನ್ ಸಖಾಫಿ, ಹನೀಫ್ ಹಾಜಿ ಬಂದರ್ ಮೊದಲಾದವರು ಉಪಸ್ಥಿತರಿದ್ದು, ಸಂಸ್ಥೆಗೆ ಶುಭ ಹಾರೈಸಿದರು.

ಸಂಸ್ಥೆಯ ಪಾಲುದಾರರಾದ ಆಸಿಫ್ ಸೂರಲ್ಪಾಡಿ, ಆಸೀಫ್ ಪಾರಂಪಳ್ಳಿ ಮತ್ತು ಇಮ್ರಾನ್ ಸ್ವಾಗತಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ನಗರದ ಖ್ಯಾತ ಉದ್ಯಮಿಗಳು, ಸಮಾಜ, ಸಂಘ ಸಂಸ್ಥೆಗಳ ಮುಖ್ಯಸ್ಥರು ಮತ್ತು ಸಂಸ್ಥೆಯ ಅನೇಕ ಹಿತೈಷಿಗಳು ಭಾಗವಹಿಸಿದ್ದರು. ಕೊರೋನ ಸುರಕ್ಷತೆ ದೃಷ್ಟಿಯಿಂದ ಗ್ರಾಹಕರು ಅವರ ವಾಹನಗಳಲ್ಲಿ ಕುಳಿತು ತಿನ್ನುವ ಸಲುವಾಗಿ ಆರ್ಡರ್ ಮಾಡಿದ ಖಾದ್ಯಗಳನ್ನು ವಾಹನಗಳಿಗೆ ಸರಬರಾಜು ಮಾಡುವ ವ್ಯವಸ್ಥೆ ಕೂಡ ಇದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News