ಉಳ್ಳಾಲ ನಗರ ಸಭೆ ಚುನಾವಣೆ: ಅಧ್ಯಕ್ಷ, ಉಪಾಧ್ಯಕ್ಷ ಕಾಂಗ್ರೆಸ್ ಮಡಿಲಿಗೆ

Update: 2020-11-02 09:28 GMT

ಉಳ್ಳಾಲ : ಇಲ್ಲಿನ ಜನರಲ್ಲಿ ಹಾಗೂ ನಗರ ಸಭಾ ಕೌನ್ಸಿಲರ್ ಗಳಲ್ಲಿ ಭಾರೀ ಕುತೂಹಲ ಸೃಷ್ಟಿಸಿದ ನಗರ ಸಭಾ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು. ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದ ನಗರಾ ಸಭಾ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗಿದೆ.

ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಹುದ್ದೆಗೆ ಕಾಂಗ್ರೆಸ್ ನಿಂದ ಚಿತ್ರಾ, ಬಿಜೆಪಿ ಯಿಂದ ರೇಶ್ಮಾ, ಎಸ್ ಡಿಪಿಐ ಯಿಂದ ಝರೀನಾ ಕಣಕ್ಕಿಳಿದಿದ್ದರು. ಇದರಲ್ಲಿ ಚಿತ್ರಾ ಅವರಿಗೆ 15, ಬಿಜೆಪಿಯ ರೇಶ್ಮಾ 10, ಎಸ್ ಡಿಪಿಐಯ ಝರೀನಾ ಅವರಿಗೆ ಆರು ಮತಗಳು ಲಭಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಚಿತ್ರಾ ಅಧ್ಯಕ್ಷೆಯಾಗಿ ಆಯ್ಕೆ ಯಾದರು.

ಬಿಜೆಪಿ ಜೆಡಿಎಸ್ ಜೊತೆ ಒಪ್ಪಂದ ಮಾಡಿಕೊಂಡು ಕಣಕ್ಕಿಳಿದಿತ್ತು. ಎಸ್ ಡಿಪಿಐ ಅಭ್ಯರ್ಥಿಗೆ ಎಸ್ ಡಿಪಿಐ ಕೌನ್ಸಿಲರ್ ಗಳ ಮತ ಮಾತ್ರ ಲಭಿಸಿದೆ. ಆರು ಸ್ಥಾನಗಳನ್ನು ಹೊಂದಿರುವ ಬಿಜೆಪಿ 10 ಮತ ಮಾತ್ರ ಗಳಿಸಲು ಶಕ್ತವಾಯಿತು‌.

ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಅಯ್ಯೂಬ್ ಮಂಚಿಲ, ಜಿ ಡಿಎಸ್ ನಿಂದ ಜಬ್ಬಾರ್, ಎಸ್ ಡಿಪಿಐ ನಿಂದು ರಮೀಝ್ ಕಣಕ್ಕಿಳಿದಿದ್ದರು.
ಇದರಲ್ಲಿ  ಕಾಂಗ್ರೆಸ್ ನ ಅಯ್ಯೂಬ್ ಮಂಚಿಲ ಅವರಿಗೆ 14 ಜೆಡಿಎಸ್ ನ ಜಬ್ಬಾರ್ ರವರಿಗೆ 11 ಮತ್ತು ಎಸ್ ಡಿಪಿಐ ಯು ರಮೀಝ್ ಅವರಿಗೆ 6 ಮತಗಳು ದೊರೆಯಿತು. ಕಾಂಗ್ರೆಸ್ ಅಭ್ಯರ್ಥಿ ಅಯ್ಯೂಬ್ ಉಪಾಧ್ಯಕ್ಷ ರಾಗಿ ಆಯ್ಕೆ ಯಾದರು.

ನಗರಸಭೆಗೆ 2018 ಆ.31 ರಂದು ಚುನಾವಣೆ ನಡೆದಿತ್ತು. ಫಲಿತಾಂಶದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು ಒಟ್ಟು 31 ಸ್ಥಾನಗಳಲ್ಲಿ ಕಾಂಗ್ರೆಸ್ 13, ಬಿಜೆಪಿ 6, ಜೆಡಿಎಸ್ 4, ಎಸ್ ಡಿಪಿಐ 6 ಸ್ವತಂತ್ರ 2 ಸ್ಥಾನ ಪಡೆದಿದೆ. ಆಡಳಿತ ಸಮಿತಿ ರಚನೆಗೆ 16 ಸ್ಥಾನಗಳ ಅವಶ್ಯಕತೆ ಇತ್ತು.

ರಾಜ್ಯ ಸರ್ಕಾರ ವಿಳಂಬ ವಾಗಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟಿತ್ತು. ಎರಡೂ ಹುದ್ದೆಗಳಿಗೆ ಜೆಡಿಎಸ್ ಹೊರತು ಪಡಿಸಿ ಉಳಿದ ಎಲ್ಲಾ ಪಕ್ಷಗಳಲ್ಲಿ ಆಕಾಂಕ್ಷಿ ಗಳು ಇದ್ದರೂ ಬಹುಮತದ ಕೊರತೆ ಎದುರಾಗಿತ್ತು.

ನಾಲ್ಕು ಸ್ಥಾನ ಹೊಂದಿರುವ ಜೆಡಿಎಸ್ ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಇರಲಿಲ್ಲ. ಈ ಕಾರಣ ದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿದಿತ್ತು. ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಯನ್ನು ಕಣಕ್ಕಿಳಿಸಿದಿತ್ತು. ಜೆಡಿಎಸ್ ಗೆ ಬಿಜೆಪಿ ಮತ ಸೇರಿ 11 ಮತಗಳು ಮಾತ್ರ ಪಡೆಯಲು ಶಕ್ತವಾಯಿತು. 

ಮಂಗಳೂರು ತಾಲೂಕು ಚುನಾವಣೆ ಆಯೋಗ ಉಪ ವಿಭಾಗಾಧಿಕಾರಿ ರವಿಚಂದ್ರ ನಾಯಕ್ ಚುನಾವಣೆ ಅಧಿಕಾರಿ ಯಾಗಿ ಕಾರ್ಯ ನಿರ್ವಹಿಸಿ ದರು. ಮನಪಾ ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ದೀಪಕ್ ಪೂಜಾರಿ ಕಾಂಗ್ರೆಸ್ ಪಕ್ಷ ದ ವೀಕ್ಷಕರಾಗಿ ಕಾರ್ಯ ನಿರ್ವಹಿಸಿ ದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News