×
Ad

ಬೈಡೆನ್, ಕಮಲಾ ಹ್ಯಾರಿಸ್‍ಗೆ ಮತ ಯಾಚಿಸಲು ಮತದಾರರಿಗೆ ಫೋನ್ ಮಾಡಿದ ಒಬಾಮ ಹೇಳಿದ್ದೇನು?

Update: 2020-11-02 16:15 IST

 ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡೆನ್ ಹಾಗೂ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್ ಪರ ಕೊನೇ ಕ್ಷಣದ ಪ್ರಚಾರದ ಅಂಗವಾಗಿ ದೂರವಾಣಿ ಮೂಲಕ ಮತದಾರರನ್ನು ಸಂಪರ್ಕಿಸುತ್ತಿರುವ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಮಹಿಳಾ ಮತದಾರರೊಬ್ಬರಿಗೆ ಕರೆ ಮಾಡಿ ಅವರ ಎಂಟು ತಿಂಗಳ ಮಗುವನ್ನುದ್ದೇಶಿಸಿ `ಹೇ ಜ್ಯಾಕ್ಸ್' ಎಂದು ಹೇಳುತ್ತಿರುವ ವೀಡಿಯೋ ವೈರಲ್ ಆಗಿದೆ.

ತಮ್ಮ ವೈಯಕ್ತಿಕ ಟ್ವಿಟ್ಟರ್ ಹ್ಯಾಂಡಲ್‍ನಲ್ಲಿ ಈ ಕುರಿತು ಒಬಾಮ ಪೋಸ್ಟ್ ಮಾಡಿದ್ದು ಈಗಾಗಲೇ  30 ಲಕ್ಷಕ್ಕೂಅಧಿಕ ಮಂದಿ ವೀಡಿಯೊವನ್ನು ವೀಕ್ಷಿಸಿದ್ದಾರೆ.

`` ಯಾರಾದರೂ ಮತದಾನಕ್ಕೆ ತೆರಳುವಂತೆ ಮಾಡುವುದು  ಅಥವಾ ಮನೆಯಲ್ಲಿಯೇ ಉಳಿದುಕೊಳ್ಳುವಂತಾಗುವ ನಡುವೆ  ನಿಮ್ಮ ಕ್ರಮದಿಂದ ಯಾವುದಾದರೂ ವ್ಯತ್ಯಾಸವಾಗಬಹುದು.  ಕೆಲವೇ ಕೆಲವು ಮತಗಳಿಂದ ಹಲವು ರಾಜ್ಯಗಳಲ್ಲಿ ಚುನಾವಣೆ ನಿರ್ಣಾಯಕವಾಗಬಹುದು. ನನ್ನ ಜತೆ ಸೇರಿ ಜೋ ಅವರ ಪರವಾಗಿ ಕೊನೆಯ ಕೆಲ ದಿನಗಳ ಕಾಲ ಕರೆಗಳನ್ನು ಮಾಡಿ,'' ಎಂದು ತಮ್ಮ ವೀಡಿಯೋ ಶೇರ್ ಮಾಡುವುದರ ಜತೆಗೆ ಒಬಾಮ ಟ್ವೀಟ್ ಮಾಡಿದ್ದಾರೆ.

ಒಬಾಮ ಅವರು ಈ ನಿರ್ದಿಷ್ಟ ವೀಡಿಯೋದಲ್ಲಿ ಅಲಿಸ್ಸಾ ಕ್ಯಾಮರೊಟ ಎಂಬ ಮಹಿಳೆಗೆ ಕರೆ ಮಾಡಿದ್ದು ಆಕೆಯೂ ಮಾಜಿ ಅಧ್ಯಕ್ಷರ ವೀಡಿಯೊ ಟ್ವೀಟ್ ಮಾಡಿದ್ದಾರಲ್ಲದೆ ``ಬರಾಕ್ ಒಬಾಮ ನನಗೆ ಕರೆ ಮಾಡಿ ನನ್ನ ಮಗುವಿನ ಜತೆಗೂ  ಮಾತನಾಡಿದ್ದಾರೆ. ಹೌದು ನನಗೆ ನಿಜವಾಗಿಯೂ ಅಚ್ಚರಿಯಾಯಿತು,'' ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News