ಕಾಸರಗೋಡು : ಭಾರೀ ಪ್ರಮಾಣದ ವಿದ್ಯುತ್ ಕಳವು ಪತ್ತೆ
Update: 2020-11-02 16:16 IST
ಕಾಸರಗೋಡು : ಜಿಲ್ಲೆಯ ಎರಡು ಕಡೆಗಳಲ್ಲಿ ಭಾರೀ ಪ್ರಮಾಣದ ವಿದ್ಯುತ್ ಕಳವು ಪತ್ತೆ ಹಚ್ಚಲಾಗಿದೆ.
ವಿದ್ಯುತ್ ಮಂಡಳಿಯ ವಿಶೇಷ ದಳಕ್ಕೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿದ್ದು, ಸುಮಾರು ಆರು ಲಕ್ಷ ರೂ. ಮೌಲ್ಯದ ವಿದ್ಯುತ್ ಕಳವು ಪತ್ತೆ ಹಚ್ಚಲಾಗಿದೆ.
ಚೆರ್ಕಳ ವಿದ್ಯುತ್ ಕಚೇರಿ ವ್ಯಾಪ್ತಿಯಲ್ಲಿ ಅ.30ರಂದು ಮುಂಜಾನೆ ನಾಲ್ಕು ಗಂಟೆಗೆ ನಡೆಸಿದ ತಪಾಸಣೆಯಿಂದ ಕಳವು ಪತ್ತೆ ಹಚ್ಚಲಾಗಿದೆ. ಸೀತಾಂಗೋಳಿ ವಿದ್ಯುತ್ ಕಚೇರಿಯ ಊಜಂಪದವಿನ ಮನೆಗೆ ದಾಳಿ ನಡೆಸಿ ಅಕ್ರಮ ಪತ್ತೆ ಹಚ್ಚಲಾಗಿದೆ. ಎರಡೂ ಕಡೆಗಳಲ್ಲಿ ಮೀಟರ್ ಗೆ ನೀಡಲಾಗಿದ್ದ ಸಂಪರ್ಕ ಕಡಿತಗೊಳಿಸಿ ನೇರವಾಗಿ ವಿದ್ಯುತ್ ಬಳಕೆ ಮಾಡಿರುವುದು ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.