ನ.4: ಮುಖ್ಯಮಂತ್ರಿಯ ದ.ಕ.ಜಿಲ್ಲಾ ಪ್ರವಾಸ
Update: 2020-11-02 17:57 IST
ಮಂಗಳೂರು, ನ.2: ಬಿಜೆಪಿ ರಾಜ್ಯ ಸಮಿತಿಯ ವಿಶೇಷ ಸಭೆಯು ನ.5ರಂದು ನಗರದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನ.4, 5ರಂದು ಮಂಗಳೂರು ಪ್ರವಾಸದಲ್ಲಿದ್ದಾರೆ.
ನ.4ರಂದು ಸಂಜೆ 7ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುಖ್ಯಮಂತ್ರಿ ಬಳಿಕ ಮಂಗಳೂರಿನಲ್ಲೇ ವಾಸ್ತವ್ಯ ಹೂಡುವರು. ನ.5ರಂದು ಬೆಳಗ್ಗೆ 10ಕ್ಕೆ ನಗರ ಟಿವಿ ರಮಣ ಪೈ ಸಭಾಂಗಣದಲ್ಲಿ ನಡೆಯುವ ಬಿಜೆಪಿ ರಾಜ್ಯ ಸಮಿತಿಯ ವಿಶೇಷ ಸಭೆಯನ್ನು ಉದ್ಘಾಟಿಸಲಿ ದ್ದಾರೆ. ಪೂ.11:30ರಿಂದ ಮಧ್ಯಾಹ್ನ 1ರವರೆಗೆ ಬಿಜೆಪಿಯ ವಿಶೇಷ ಸಭೆಯಲ್ಲಿ ಭಾಗವಹಿಸುವರು. ವಿರಾಮದ ಬಳಿಕ ಸಭೆ ಮುಂದುವರಿಯಲಿದ್ದು, ಸಂಜೆ 5ರವರೆಗೆ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ 7:35ಕ್ಕೆ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.