×
Ad

ಉ.ಪ್ರ. ಮುಖ್ಯಮಂತ್ರಿ ಆದಿತ್ಯನಾಥ್‌ರನ್ನು ಭೇಟಿಯಾದ ಪೇಜಾವರಶ್ರೀ

Update: 2020-11-02 19:19 IST

ಉಡುಪಿ, ನ.2: ಈಗ ಅಯೋಧ್ಯೆ ಸೇರಿದಂತೆ ಉತ್ತರ ಭಾರತದ ಪ್ರವಾಸ ದಲ್ಲಿರುವ ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು ಸೋಮವಾರ ಸಂಜೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನು ಭೇಟಿ ಮಾಡಿ ರಾಮಮಂದಿರ ನಿರ್ಮಾಣದ ಕುರಿತು ಚರ್ಚೆ ನಡೆಸಿದರು.

ಪೇಜಾವರಶ್ರೀಗಳನ್ನು ಆದರಪೂರ್ವಕವಾಗಿ ಬರಮಾಡಿಕೊಂಡ ಯೋಗಿ, ಉಭಯ ಕುಶಲೋಪರಿ ಬಳಿಕ ಕೊರೋನ ವಿಪತ್ತಿನ ಕುರಿತೂ ಸ್ವಾಮೀಜಿ ಬಳಿ ಮಾತನಾಡಿದರು. ಲೋಕದೊಳಿತಿಗಾಗಿ ಶ್ರೀಕೃಷ್ಣನಲ್ಲಿ ಪ್ರಾರ್ಥಿಸುವಂತೆ ಯೋಗಿ ಶ್ರೀಗಳಲ್ಲಿ ವಿನಂತಿಸಿದರು. ಬಳಿಕ ಇಬ್ಬರೂ ಶ್ರೀರಾಮ ಮಂದಿರ ನಿರ್ಮಾಣ ಕುರಿತು ಚರ್ಚೆ ನಡೆಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News