ವೇತನ ಬಾಕಿ: ದಿಲ್ಲಿಯ ಮನಪಾ ಆಸ್ಪತ್ರೆಗಳ ನರ್ಸ್‌ಗಳಿಂದ ಅನಿರ್ದಿಷ್ಟಾವಧಿ ಮುಷ್ಕರ

Update: 2020-11-02 16:03 GMT

ಹೊಸದಿಲ್ಲಿ,ನ.2: ಉತ್ತರ ದಿಲ್ಲಿ ಮಹಾನಗರ ಪಾಲಿಕೆ ಅಧೀನದ ಹಿಂದು ರಾವ್ ಆಸ್ಪತ್ರೆ ಮತ್ತು ಇತರ ಕೆಲವು ಆಸ್ಪತ್ರೆಗಳ ಸುಮಾರು 650 ನರ್ಸ್‌ಗಳು ಆಗಸ್ಟ್‌ನಿಂದ ಅಕ್ಟೋಬರ್‌ವರೆಗಿನ ತಮ್ಮ ವೇತನ ಬಾಕಿಯ ಪಾವತಿಗೆ ಒತ್ತಡ ಹೇರಲು ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಆರಂಭಿಸಿದ್ದಾರೆ.

ಈ ಹಿಂದೆ ವೇತನ ಪಾವತಿಗಾಗಿ ಈ ಆಸ್ಪತ್ರೆಗಳ ಕಿರಿಯ ಮತ್ತು ಹಿರಿಯ ವೈದ್ಯರೂ ಪ್ರತಿಭಟನೆ ನಡೆಸಿದ್ದರಾದರೂ ಉತ್ತರ ದಿಲ್ಲಿ ಮನಪಾ ತಮ್ಮ ಸೆಪ್ಟಂಬರ್‌ವರೆಗಿನ ವೇತನಗಳನ್ನು ನೀಡಿದ ಬಳಿಕ ಮುಷ್ಕರವನ್ನು ಹಿಂದೆಗೆದುಕೊಂಡಿದ್ದರು.

ಹಿಂದು ರಾವ್ ಆಸ್ಪತ್ರೆಯ ನರ್ಸ್‌ಗಳ ಕಲ್ಯಾಣ ಸಂಘವು ನ.2ರಿಂದ ಮುಷ್ಕರವನ್ನು ಆರಂಭಿಸುವುದಾಗಿ ಸೂಚಿಸಿ ಶನಿವಾರ ಉತ್ತರ ದಿಲ್ಲಿ ಮೇಯರ್‌ಗೆ ಪತ್ರವನ್ನು ಬರೆದಿತ್ತು.

ಕಸ್ತೂರಬಾ ಆಸ್ಪತ್ರೆ,ರಾಜನ್ ಬಾಬು ಕ್ಷಯರೋಗ ಆಸ್ಪತ್ರೆ ಮತ್ತು ಶ್ರೀಮತಿ ಗಿರ್ಧಾರಿ ಲಾಲ್ ಹೆರಿಗೆ ಆಸ್ಪತ್ರೆಗಳ ನರ್ಸ್‌ಗಳೂ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News