ಕಡಿಯುತ್ತಿದ್ದ ಮರ ಬಡಿದು ವ್ಯಕ್ತಿ ಮೃತ್ಯು
Update: 2020-11-02 22:11 IST
ಹಿರಿಯಡ್ಕ, ನ.2: ಕಡಿಯುತ್ತಿದ್ದ ಮರ ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನ.1ರಂದು ಬೆಳಗ್ಗೆ 10ಗಂಟೆ ಸುಮಾರಿಗೆ ಬೊಮ್ಮಾರಬೆಟ್ಟು ಗ್ರಾಮದ ಮಾಣೈ ಎಂಬಲ್ಲಿ ನಡೆದಿದೆ.
ಮೃತರನ್ನು ಬೊಮ್ಮಾರಬೆಟ್ಟು ಗ್ರಾಮದ ಗುಡ್ಡೆಯಂಗಡಿ ಕೊಂಡಾಡಿ ಶಾಲೆ ಬಳಿಯ ನಿವಾಸಿ ಸುಂದರ(57) ಎಂದು ಗುರುತಿಸಲಾಗಿದೆ. ಇವರು ಗುತ್ತಿಗೆ ದಾರ ಸಂತೋಷ ಪೂಜಾರಿಯೊಂದಿಗೆ ಮಾಣೈ ಕೃಷ್ಣ ನಾಯ್ಕ ಎಂಬವರ ಮನೆಯ ಬಳಿಯ ಮರವನ್ನು ಕಡಿಯುತ್ತಿದ್ದರು.
ಈ ವೇಳೆ ಆಕಸ್ಮಿಕವಾಗಿ ಕಡಿಯುತ್ತಿದ್ದ ಮರವು ಇನ್ನೊಂದು ಮರದ ಮೇಲೆ ಬಿದ್ದು, ಕಡಿಯುತ್ತಿದ್ದ ಮರದ ಬುಡವು ಹಿಂದಕ್ಕೆ ಜಾರಿ ಸುಂದರ ಅವರ ಹಣೆಗೆ ಬಡಿಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.