×
Ad

ಟರ್ಕಿ: ಅವಶೇಷಗಳಡಿಯಿಂದ ಇಬ್ಬರು ಬಾಲಕಿಯರ ರಕ್ಷಣೆ

Update: 2020-11-02 23:35 IST

ಅಂಕಾರ (ಟರ್ಕಿ), ನ. 2: ಪ್ರಬಲ ಭೂಕಂಪ ಸಂಭವಿಸಿದ ಮೂರು ದಿನಗಳ ಬಳಿಕ, ಟರ್ಕಿಯ ಕರಾವಳಿ ಪ್ರದೇಶ ಇಝ್ಮಿರ್‌ನಲ್ಲಿ ಕುಸಿದ ಅಪಾರ್ಟ್‌ಮೆಂಟ್ ಕಟ್ಟಡಗಳ ಅಡಿಯಿಂದ ರಕ್ಷಣಾ ಕಾರ್ಯಕರ್ತರು ಇಬ್ಬರು ಬಾಲಕಿಯರನ್ನು ರಕ್ಷಿಸಿದ್ದಾರೆ.

ಟರ್ಕಿಯಲ್ಲಿ ಭೂಕಂಪದಿಂದಾಗಿ ಪ್ರಾಣ ಕಳೆದುಕೊಂಡವರ ಒಟ್ಟು ಸಂಖ್ಯೆ ಸೋಮವಾರ 79ನ್ನು ತಲುಪಿದೆ. ಟರ್ಕಿಯ ಮೂರನೇ ಅತಿ ದೊಡ್ಡ ನಗರ ಇಝ್ಮಿರ್‌ನಲ್ಲಿ ಅವಶೇಷಗಳಡಿಯಲ್ಲಿ ಹೆಚ್ಚಿನ ಮೃತದೇಹಗಳು ಪತ್ತೆಯಾಗಿವೆ.

ಗ್ರೀಸ್‌ನ ದ್ವೀಪ ಸಮೋಸ್‌ನ ಈಶಾನ್ಯಕ್ಕೆ ಏಜಿಯನ್ ಸಮುದ್ರದಲ್ಲಿ ಕೇಂದ್ರ ಬಿಂದು ಹೊಂದಿದ್ದ ಭೂಕಂಪದ ಪರಿಣಾಮವಾಗಿ 1,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸಮೋಸ್‌ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಹಾಗೂ ಕನಿಷ್ಠ 19 ಮಂದಿ ಗಾಯಗೊಂಡಿದ್ದಾರೆ.

ಭೂಕಂಪ ಸಂಭವಿಸಿದ ಸುಮರು 65 ಗಂಟೆಗಳ ಬಳಿಕ, ಸೋಮವಾರ ಮುಂಜಾನೆ ಪಶ್ಚಿಮ ಇಝ್ಮಿರ್ ಪ್ರಾಂತದ ಬೈರಾಕ್ಲಿ ಜಿಲ್ಲೆಯಲ್ಲಿ ಅವಶೇಷಗಳಡಿಯಿಂದ ಮೂರು ವರ್ಷದ ಬಾಲಕಿಯನ್ನು ಹೊರಗೆ ಎಳೆಯಲಾಯಿತು.

ಇದೇ ಸಂದರ್ಭದಲ್ಲಿ ಕುಸಿದ ಕಟ್ಟಡವೊಂದರ ಅಡಿಯಿಂದ 14 ವರ್ಷದ ಬಾಲಕಿಯೊಬ್ಬಳನ್ನೂ ರಕ್ಷಣಾ ಕಾರ್ಯಕರ್ತರು ಮೇಲಕ್ಕೆತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News