×
Ad

ಇನೋಳಿ: ತಡೆಗೋಡೆ, ರಸ್ತೆ ಕಾಮಗಾರಿಗೆ ಚಾಲನೆ

Update: 2020-11-03 11:04 IST

ಉಳ್ಳಾಲ‌, ನ.3: ಉತ್ತಮ ರಸ್ತೆಯಿಂದ ಆಯಾ ಪ್ರದೇಶ ಅಭಿವೃದ್ಧಿ ಕಾಣಲು ಸಾಧ್ಯ, ಗ್ರಾಮೀಣ ಪ್ರದೇಶ ಅಭಿವೃದ್ಧಿ ಕಂಡಾಗ ದೇಶವೂ ಅಭಿವೃದ್ಧಿಯಾಗುತ್ತದೆ ಎಂದು ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ಅಭಿಪ್ರಾಯಪಟ್ಟರು.

ಪಾವೂರು ಗ್ರಾಮ ಪಂಚಾಯತ್ ನ 15ನೇ ಹಣಕಾಸು ಯೋಜನೆಯಡಿ ಪಾವೂರು ಗ್ರಾಮದ ಇನೋಳಿ 'ಎ' ಸೈಟ್ ಎಂಬಲ್ಲಿ ತಡೆಗೋಡೆ ರಸ್ತೆ ನಿರ್ಮಾಣಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ಪಾವೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಮುಹಮ್ಮದ್ ಚಕ್ಕರ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಅಹ್ಮದ್ ಕುಂಞಿ, ಪಂಚಾಯತ್ ಸಿಬ್ಬಂದಿ ಚಿತ್ರಾ ಶೆಟ್ಟಿ, ಇನೋಳಿ ಜಾಮಿಯಾ ಮುಬಾರಕ್ ಮಸೀದಿಯ ಕೋಶಾಧಿಕಾರಿ ಶಬೀರ್ ಇನೋಳಿ, ಸ್ಥಳೀಯ ಮುಖಂಡರಾದ ತುಕ್ರ  ಪೂಜಾರಿ, ಮುಹಮ್ಮದ್ ಪುತ್ತು, ಫಾರೂಕ್ ಸೈಟ್, ಇಸ್ಮಾಯೀಲ್ ಇನೋಳಿ,  ಹಮೀದ್ ಅಮ್ಮಿ ಇನೋಳಿ, ಫಾರೂಕ್ ಪೊರ್ಸೋಟ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News