ಸಾಲಿಗ್ರಾಮ ಪ.ಪಂ. ಅಧ್ಯಕ್ಷರಾಗಿ ಸುಲತಾ ಹೆಗ್ಡೆ, ಉಪಾಧ್ಯಕ್ಷರಾಗಿ ಅನುಸೂಯ ಹೇರ್ಳೆ ಆಯ್ಕೆ

Update: 2020-11-03 15:54 GMT

ಕೋಟ, ನ.3: ಸಾಲಿಗ್ರಾಮ ಪಟ್ಟಣ ಪಂಚಾಯತ್ ನೂತನ ಅಧ್ಯಕ್ಷರಾಗಿ ಬಿಜೆಪಿಯ ಸುಲತಾ ಹೆಗ್ಡೆ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ಅನುಸೂಯ ಆನಂದ ರಾಮ್ ಹೇರ್ಳೆ ನ.2ರಂದು ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

16 ಮಂದಿ ಸಂಖ್ಯಾಬಲದ ಪ.ಪಂ. ಪಂಚಾಯತ್‌ನಲ್ಲಿ ಅಧ್ಯಕ್ಷ ಸ್ಥಾನ 3ಬಿ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಏಕೈಕ ನಾಮಪತ್ರ ಸಲ್ಲಿಕೆಯಾದ ಕಾರಣ ಅವಿರೋಧ ಆಯ್ಕೆ ನಡೆದಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಅನುಸೂಯ ಆನಂದರಾಮ್ ಹೇರ್ಳೆ ಹಾಗೂ ಕಾಂಗ್ರೆಸ್‌ನ ಝಹಿರಾ ಸ್ಪರ್ಧೆ ನಡೆದಿತ್ತು.

ಅನುಸೂಯ ಹೇರ್ಳೆ ಪರವಾಗಿ ಸಂಸದರು, ಶಾಸಕರು ಸೇರಿದಂತೆ ಪಕ್ಷದ 12 ಮತಗಳು, ಝಹಿರಾ ಪರವಾಗಿ ಕಾಂಗ್ರೆಸ್‌ನ 5 ಮತಗಳು ದೊರೆತವು. ಪಕ್ಷೇತರ ಸದಸ್ಯೆ ರತ್ನಾ ನಾಗರಾಜ್ ಗಾಣಿಗ ಈ ಪ್ರಕ್ರಿಯೆಯಲ್ಲಿ ತಟಸ್ಥತೆ ಕಾಯ್ದುಕೊಂಡರು. ಚುನಾವಣಾಧಿಕಾರಿಯಾಗಿದ್ದ ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೌರಯ್ಯ ಫಲಿತಾಂಶ ಘೋಷಿಸಿದರು.

ಸಂಸದೆ ಶೋಭ ಕರಂದ್ಲಾಜೆ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಮೊದಲಾದವರು ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News