ಮಲ್ಪೆ: 153 ಬಡವರಿಗೆ ಬೋರ್‌ವೆಲ್ ನಿರ್ಮಿಸಿ, ಪಂಪುಸೆಟ್ ವಿತರಣೆ
Update: 2020-11-03 21:26 IST
ಮಲ್ಪೆ, ನ.3: ಸಮಾಜ ಸೇವಕ ಕೊಡುಗೈ ದಾನಿ ನಕ್ವ ರಹಮತುಲ್ಲಾಹ ಬೆಂಗ್ರೆ, ಕೆಮ್ಮಣ್ಣು, ಕುದ್ರು, ಪಡೆಕರೆ, ಬೈಲಕೆರೆ, ಮಲ್ಪೆ, ನೆರ್ಗಿ ಹಾಗೂ ಬಲರಾಮನಗರದ ಸುಮಾರು 153 ಮಂದಿ ಬಡವರಿಗೆ ಅವರ ಮನೆ ಮುಂದೆ ಬೋರ್‌ವೆಲ್ ನಿರ್ಮಿಸಿ ಅದರ ಪಂಪ್‌ಸೆಟ್‌ಗಳನ್ನು ಗುರುವಾರ ವಿತರಿಸಿದರು.
ಮುಖ್ಯ ಅತಿಥಿಗಳಾಗಿ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ, ಮಲ್ಪೆಪೊಲೀಸ್ ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್. ಮಾತನಾಡಿದರು. ಉದ್ಯಮಿ ಆನಂದ ಸಾಲ್ಯಾನ್, ಇಸ್ಮಾಯಿಲ್, ಅಕ್ಬರ್ ಜೈಲಾಹುದಿ ಉಪಸ್ಥಿತರಿದ್ದರು.
ನಕ್ವ ರೆಹಮುತುಲ್ಲಾ ಸ್ವಾಗತಿಸಿದರು. ಕೃಷ್ಣ ಶ್ರಿಯಾನ್ ವಂದಿಸಿದು.