×
Ad

ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ: ಪ್ರಸಿದ್ಧ ಬಾಲಿವುಡ್ ನಟನ ಬಂಧನ

Update: 2020-11-03 21:55 IST

 ಮುಂಬೈ: ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡಿದ ಆರೋಪದಲ್ಲಿ ಬಾಲಿವುಡ್ ನಟ ವಿಜಯ ರಾಜ್ ಅವರನ್ನು ಸೋಮವಾರ ಬಂಧಿಸಲಾಗಿದೆ ಎಂದು  ಎಎನ್ ಐ ವರದಿ ಮಾಡಿದೆ.ನಟನನ್ನು ಮಹಾರಾಷ್ಟ್ರದ ಗೊಂಡಿಯಾದಿಂದ ಬಂಧಿಸಲಾಗಿದೆ. ನಟನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಗೊಂಡಿಯಾದ ಹೆಚ್ಚುವರಿ ಪೊಲೀಸ್ ವರಿಷ್ಠ ಅತುಲ್ ಕುಲಕರ್ಣಿ ಹೇಳಿದ್ದಾರೆ.

ವಿಜಯ್ ವಿರುದ್ಧ ಮಹಿಳೆಯೊಬ್ಬರು ಗೊಂಡಿಯಾದ ರಾಮನಗರ ಪೊಲೀಸ್ ಠಾಣೆಯಲ್ಲಿ ನ.2 ರಂದು ರಾತ್ರಿ ದೂರು ದಾಖಲಿಸಿದ್ದರು.  ದೂರಿನ ಆಧಾರದಲ್ಲಿ ನಟನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರಾಮನಗರ ಪೊಲೀಸರು ವಿಜಯ್ ಅವರನ್ನು ಮಂಗಳವಾರ ಗೊಂಡಿಯಾ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ನ್ಯಾಯಾಲಯ ಜಾಮೀನು ನೀಡಿದೆ.

ಮಧ್ಯಪ್ರದೇಶದಲ್ಲಿ ಸಿನೆಮಾ ಚಿತ್ರೀಕರಣದ ವೇಳೆ ವಿಜಯ್ ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡಿದ ಆರೋಪ ಹೊರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News