ಉದ್ಯಾವರ: ಯುಎಫ್‌ಸಿ ಮಾತುಕತೆ-2020 ಬಿಡುಗಡೆ

Update: 2020-11-03 16:29 GMT

ಉದ್ಯಾವರ, ನ.3: ಒಂದು ಸಂಸ್ಥೆಯ ಚಟುವಟಿಕೆಗಳು ದಾಖಲಾಗುವುದು ಇಂದಿನ ಸಂದರ್ಭದಲ್ಲಿ ಅನಿವಾರ್ಯ. ಸಂಸ್ಥೆ ಎಷ್ಟು ಕೆಲಸಗಳನ್ನು ಮಾಡಿದರೂ ಅದರ ನೆನಪು ಒಂದೆಡೆ ದಾಖಲಾದರೆ ಮಾತ್ರ ದೀರ್ಘ ಕಾಲ ಉಳಿಯುತ್ತದೆ ಮಾಜಿ ತಾಲೂಕು ಪಂಚಾಯತ್ ಸದಸ್ಯ ಗಿರೀಶ್ ಕುಮಾರ್ ಹೇಳಿದ್ದಾರೆ.

ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲಿನ 2019-20ನೇ ಸಾಲಿನ ವರದಿ ‘ಯು.ಎಫ್.ಸಿ. ಮಾತುಕತೆ -2020’ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಶೇಖರ್ ಕೆ. ಕೋಟ್ಯಾನ್ ಮಾತನಾಡಿ, ಸಂಸ್ಥೆಯ ಅಭಿವೃದ್ಧಿ ದೃಷ್ಟಿಯಿಂದ ‘ಮಾತುಕತೆ’ ಮಹತ್ವದ ಸ್ಥಾನ ಪಡೆದಿದೆ. ಕಳೆದ ಐದು ವರ್ಷಗಳ ಈ ಕಾರ್ಯಕ್ರಮ ನಿರಂತರವಾಗಿ ಮುಂದುವರಿಯಲಿ ಎಂದು ಹೇಳಿದರು.

ನಿರ್ದೇಶಕರಾದ ಉದ್ಯಾವರ ನಾಗೇಶ್ ಕುಮಾರ್, ಶರತ್ ಕುಮಾರ್, ಚಂದ್ರಾವತಿ ಎಸ್. ಭಂಡಾರಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಪಳ್ಳಿ, ಕಾರ್ಯದರ್ಶಿ ಅನೂಪ್ ಕುಮಾರ್, ರವಿಕಿರಣ್ ಪಿ.ಎಸ್., ಉಪಾಧ್ಯಕ್ಷ ಪುಂಡರೀಶ್ ಕುಂದರ್, ಮಾಜಿ ಅಧ್ಯಕ್ಷ ತಿಲಕ್‌ರಾಜ್ ಸಾಲ್ಯಾನ್, ಮಾಜಿ ಪ್ರಧಾನ ಕಾರ್ಯದರ್ಶಿ ಗಿರೀಶ್ ಗುಡ್ಡೆಯಂಗಡಿ ಮುಂತಾದವರು ಉಪಸ್ಥಿತರಿದ್ದರು.

ಅಧ್ಯಕ್ಷ ಶೇಖರ್ ಕೆ. ಕೋಟ್ಯಾನ್ ಸ್ವಾಗತಿಸಿ, ಉಪಾಧ್ಯಕ್ಷ ಪುಂಡರೀಶ್ ಕುಂದರ್ ವಂದಿಸಿದರು. ರಿಯಾಝ್ ಪಳ್ಳಿ ಕಾರ್ಯಕ್ರಮ ನಿರ್ವಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News