×
Ad

500 ನೆರೆ ಸಂತ್ರಸ್ತ ಕುಟಂಬಗಳಿಗೆ ಪರಿಹಾರ ಕಿಟ್ ವಿತರಣೆ

Update: 2020-11-03 22:44 IST

ಉಡುಪಿ, ನ.3: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾದ ಸುಮಾರು 500 ಅರ್ಹ ಸಂತ್ರಸ್ತ ಕುಟಂಬಗಳಿಗೆ ಲಯನ್ಸ್ ಜಿಲ್ಲೆ 317 ಸಿಯ ನೇತೃತ್ವದಲ್ಲಿ ಪರಿಹಾರ ರೂಪದಲ್ಲಿ ಆಹಾರಧಾನ್ಯ ಹಾಗೂ ದಿನೋಪಯೋಗಿ ವಸ್ತುಗಳನ್ನೊಳಗೊಂಡ ಕಿಟ್ಗಳನ್ನು ಇಂದು ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ವಿತರಿಸಲಾಯಿತು.

ಲಯನ್ಸ್ ಜಿಲ್ಲಾ ಗವರ್ನರ್ ನೀಲಕಂಠ ಎಂ.ಹೆಗಡೆ ಹಾಗೂ ಪ್ರಥಮ ಉಪ ಜಿಲ್ಲಾ ಗವರ್ನರ್ ವಿಶ್ವನಾಥ ಶೆಟ್ಟಿ, ಜಿಲ್ಲಾ ಸಂಪುಟ ಕಾರ್ಯದರ್ಶಿ ಟಿ.ಜಿ. ಆಚಾರ್ಯ, ಪ್ರಾಂತ್ಯಾಧ್ಯಕ್ಷ ರಂಜನ್ ಕೆ., ಗಣೇಶ ಸುವರ್ಣ, ಜಿಲ್ಲಾ ಸಂಯೋಜಕ ಸತೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ವಿತರಣಾ ವ್ಯವಸ್ಥೆಯಲ್ಲಿ ಜಿಲ್ಲಾ ಕಾರ್ಯನಿರ್ವಹಣಾ ಕಾರ್ಯದರ್ಶಿ ರವಿ ರಾಜ್ ನಾಯಕ್, ಕಿರಣ್ ರಂಗಯ್ಯ ಮತ್ತಿತರರು ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News