ಅರ್ನಬ್ ಬಂಧನಕ್ಕೆ ಎಡಿಟರ್ಸ್ ಗಿಲ್ಡ್ ಖಂಡನೆ
Update: 2020-11-04 13:36 IST
ಹೊಸದಿಲ್ಲಿ, ನ.4: ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಬಂಧನವನ್ನು ಖಂಡಿಸಿ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ, ಬಂಧನದಲ್ಲಿರುವ ವೇಳೆ ಅವರನ್ನು ನ್ಯಾಯಯುತವಾಗಿ ನೋಡಿಕೊಳ್ಳುವಂತೆ ಮಹಾರಾಷ್ಟ್ರದ ಮುಖ್ಯಮಂತ್ರಿಗೆ ಆಗ್ರಹಿಸಿದೆ.
ಮುಂಬೈ ಪೊಲೀಸರು ಗೋಸ್ವಾಮಿಯನ್ನು ಬಂಧಿಸಿರುವುದು ತಿಳಿದು ಆಘಾತವಾಯಿತು ಎಂದಿರುವ ಸಂಸ್ಥೆ ಅವರ ದಿಢೀರ್ ಬಂಧನ ಬಹಳಷ್ಟು ಕಳವಳಕಾರಿ ಎಂದು ಹೇಳಿದೆ.
‘‘ಅರ್ನಬ್ ಅವರನ್ನು ನ್ಯಾಯಯುತವಾಗಿ ನೋಡಿಕೊಳ್ಳುವಂತೆ ಹಾಗೂ ಮಾಧ್ಯಮಗಳ ಟೀಕಾತ್ಮಕ ವರದಿಗಳ ವಿರುದ್ಧ ಸರಕಾರದ ಅಧಿಕಾರ ಬಳಕೆಯಾಗದಂತೆ ನೋಡಿಕೊಳ್ಳಬೇಕು’’ ಎಂದು ಎಡಿಟರ್ಸ್ ಗಿಲ್ಡ್ ಹೇಳಿದೆ.
ಮುಂಬೈಯ ಅರ್ನಬ್ ನಿವಾಸದಿಂದ ಆಲಿಬಾಘ್ ಪೊಲೀಸರ ತಂಡ ಅವರನ್ನು ಬಂಧಿಸಿತ್ತು. ಈ ನಡುವೆ ತನ್ನನ್ನು ಮನೆಯಿಂದ ಬಂಧಿಸುವ ವೇಳೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಅರ್ನಬ್ ದೂರಿದ್ದಾರೆ.