×
Ad

ಅರ್ನಬ್ ಬಂಧನ ನಂತರ #WellDoneMumbaiPolice ಹ್ಯಾಶ್ ಟ್ಯಾಗ್ ಟ್ರೆಂಡಿಂಗ್

Update: 2020-11-04 14:33 IST

ಮುಂಬೈ :  ಇಂಟೀರಿಯರ್ ಡಿಸೈನರ್ ಒಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆಂಬ ಆರೋಪದ ಮೇಲೆ ಇಂದು ಮುಂಬೈ ಪೊಲೀಸರಿಂದ ರಿಪಬ್ಲಿಕ್ ಟಿವಿಯ  ಸಂಪಾದಕ ಅರ್ನಬ್ ಗೋಸ್ವಾಮಿ ಅವರ ಬಂಧನ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹಿತ ಹಲವರಿಂದ ಖಂಡನೆಗೊಳಗಾದರೆ, ಹಲವು ಟ್ವಿಟ್ಟರಿಗರು  ಮಾತ್ರ ಮುಂಬೈ ಪೊಲೀಸರ  ಕ್ರಮವನ್ನು ಶ್ಲಾಘಿಸಿದ್ದಾರಲ್ಲದೆ ಗೋಸ್ವಾಮಿ ಅವರ ಬಂಧನ ಸಮರ್ಥನೀಯ ಎಂದು ಹೇಳಿಕೊಂಡಿದ್ದಾರೆ. ಇದೇ ಕಾರಣದಿಂದ ಇಂದು #WellDoneMumbaiPolice (#ವೆಲ್‍ಡನ್‍ಮುಂಬೈಪೊಲೀಸ್) ಹ್ಯಾಶ್ ಟ್ಯಾಗ್ ಟ್ವಿಟ್ಟರ್‍ನಲ್ಲಿ ಟ್ರೆಂಡಿಂಗ್ ಆಗಿದೆ.

ಮುಂಬೈ ಪೊಲೀಸರ ಕ್ರಮವನ್ನು ಸಮರ್ಥಿಸಿ ಕೆಲವರು ಮಾಡಿದ ಟ್ವೀಟ್‍ಗಳು ಇಲ್ಲಿವೆ.

ಹಂಸರಾಜ್ ಮೀನಾ ಎಂಬವರು ಟ್ವೀಟ್ ಮಾಡಿ ``ಮುಂಬೈ ಪೊಲೀಸರಿಗೆ ಸೆಲ್ಯೂಟ್,  ನೀವು ಈ ದಶಕದ ಅತಿ ದೊಡ್ಡ ಕೆಲಸ ಮಾಡಿದ್ದೀರಿ,'' ಎಂದು ಬರೆದಿದ್ದಾರೆ.

ಇನ್ನೊಂದು ಟ್ವೀಟ್ ಮಾಡಿರುವ ಅವರು ``ಮುಂಬೈ ಪೊಲೀಸರೇ ವೆಲ್ ಡನ್. ದೇಶ ನಿಮ್ಮ ಜತೆಗಿದೆ.  ದ್ವೇಷ ಹರಡುವ ಜನರನ್ನು ಬಂಧಿಸಬೇಕಿದೆ,'' ಎಂದು ಹೇಳಿದ್ದಾರೆ.

ತ್ರಿಪುರಾ ಪ್ರದೇಶ ಯುವ ಕಾಂಗ್ರೆಸ್ ತನ್ನ ಟ್ವಿಟ್ಟರ್ ಹ್ಯಾಂಡಲ್‍ನಲ್ಲಿ ಹೀಗೆ ಬರೆದಿದೆ- ``ಆತ್ಮಹತ್ಯೆಯಿಂದುಂಟಾದ ಸಾವಿಗೆ ಜವಾಬ್ದಾರರಾಗಿರುವ ಅರ್ನಬ್ ಗೋಸ್ವಾಮಿಯನ್ನು @ಬಿಜೆಪಿ4ಇಂಡಿಯಾ  ಬಹಿರಂಗವಾಗಿ ಬೆಂಬಲಿಸುತ್ತಿರುವುದು ಆಘಾತಕಾರಿ, ಭಕ್ತರು ಗೋದಿ ಮೀಡಿಯಾದ ಬಗ್ಗೆ ಕಾಳಜಿ ತೋರಿಸಿದ್ದಾರೆ,'' ಎಂದು ಹೇಳಿದೆ.

ಶಿವಸೇನೆ ನಾಯಕ ಸಂಜಯ್ ರಾವತ್ ಟ್ವೀಟ್ ಮಾಡಿ ``ಬಿಜೆಪಿಯೇಕೆ #ಜಸ್ಟಿಸ್‍ಫಾರ್ ಅನ್ವಯ್‍ನಾಯ್ಕ್ ವಿಚಾರದಲ್ಲಿ ಮೌನವಾಗಿದೆ. ಅವರೊಬ್ಬ ಸಾಮಾನ್ಯ ವ್ಯಕ್ತಿ ಹಾಗೂ ಆತನನ್ನು ಕೊಂದ ವ್ಯಕಿ ಒಬ್ಬ ಖ್ಯಾತ ಪತ್ರಕತನೆಂಬ ಕಾರಣಕ್ಕೆ ಎಂದು ನನಗೆ ತಿಳಿದಿದೆ. ಈಗ ಬಿಜೆಪಿ ಈ ಪತ್ರಕರ್ತನ ಸಮರ್ಥನೆಗೆ ನಿಂತಿದೆ. ಬಿಜೆಪಿ  ಕಾನೂನಿನ ಮೇಲೆ ವಿಶ್ವಾಸ ಕಳೆದುಕೊಂಡಿದೆ.'' ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News