ದಮ್ಮಾಮ್ : ಇಂಡಿಯನ್ ಸೋಶಿಯಲ್ ಫೋರಮ್ ವತಿಯಿಂದ ಕನ್ನಡ ರಾಜ್ಯೋತ್ಸವ

Update: 2020-11-04 11:56 GMT

ದಮ್ಮಾಮ್ : ರಾಷ್ತ್ರೀಯತೆಯ ಹೆಸರಲ್ಲಿ ದೇಶದ ಪ್ರಾದೇಶಿಕ ವೈವಿದ್ಯತೆಯನ್ನು  ನಾಶಪಡಿಸುವ ತಂತ್ರಗಳು ದಿನಂಪ್ರತಿ ವೇಗ ಪಡೆದುಕ್ಕೊಳ್ಳುತ್ತಿರುವ ಇ ಸಂದಿಗ್ದ ಪರಿಸ್ಥಿತಿಯಲ್ಲಿ ರಾಜ್ಯದ ಭಾಷೆ, ಸಂಸ್ಕೃತಿ, ಅಸ್ಮಿತೆಯನ್ನ ಉಳಿಸಿ ಬೆಳೆಸಿ ಅದರ ಮಹತ್ವವನ್ನ ಜನರೆಡೆಗೆ ಪ್ರಚುರಪಡಿಸುವುದು ನಮ್ಮಲ್ಲರ ಜವಾಬ್ದಾರಿಯಾಗಿದೆ. ಪ್ರತಿ ವರ್ಷ ಸೌದಿ ಅರೇಬಿಯಾದಾದ್ಯಂತ ರಾಜ್ಯೋತ್ಸವ ಆಚರಣೆಯ ಮೂಲಕ ಇಂಡಿಯನ್ ಸೋಶಿಯಲ್ ಫೋರಮ್ ಅನಿವಾಸಿ ಕನ್ನಡಿಗರಲ್ಲಿ ರಾಜ್ಯಸ್ನೇಹ ವನ್ನ ಬಿತ್ತುದರಲ್ಲಿ  ಶ್ರಮ ವಹಿಸಿದೆ ಎಂದು ಇಂಡಿಯನ್ ಸೋಶಿಯಲ್ ಫೋರಮ್ ಪೂರ್ವ ಪ್ರಾಂತ್ಯದ ಅಧ್ಯಕ್ಷ  ಮುಹಮ್ಮದ್ ಶರಿಫ್ ಜೋಕಟ್ಟೆ ಹೇಳಿದರು.

ಇಂಡಿಯನ್ ಸೋಶಿಯಲ್ ಫೋರಮ್ ವತಿಯಿಂದ 65ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಅಂತರ್ಜಾಲದ ಅನಿವಾಸಿ ಕನ್ನಡಿಗರ ಸಮ್ಮಿಲನ 2020 ಉದ್ದೇಶಿಸಿ ಅವರು ಮಾತನಾಡಿದರು.

ಉದ್ಘಾಟನ ಭಾಷಣಗೈದ ಎಸ್ ಡಿ ಪಿ ಐ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಮಜೀದ್ ಖಾನ್ ಕನ್ನಡಿಗ ರೈತರ ಯಾತನೆಗಳನ್ನ ಕಡೆಗಣಿಸಿ ಅವರನ್ನ ಮುಗಿಸುವ ಕೃಷಿ ನೀತಿಗಳನ್ನು ಜಾರಿಗೆ ತಂದು ಪ್ರವಾಹ ಬಂದು ಅದಾಗಲೇ ನುಚ್ಚುನೂರಾದ ರೈತರ ಜೀವನವನ್ನ ನಾಯಿ ಪಾಡಾಗಿಸಿದೆ ಈಗಿನ ಸರಕಾರ, ಕನ್ನಡಿಗ ರೈತರ ಬವಣೆ ಕೇಳದೆ ಹಿಂದಿ ಹೇರಿಕೆಯನ್ನ ಸರಕಾರಗಳು ಪ್ರೋತ್ಸಾಹಿಸುತ್ತಿದೆ. ಕನ್ನಡಿಗರು ಇದೆಲ್ಲವನ್ನ ಸೂಕ್ಷ್ಮವಾಗಿ ಅವಲೋಕಿಸಬೇಕಾಗಿದೆ  ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ಖ್ಯಾತ ರಂಗಕರ್ಮಿ ಪಿಯುಸಿಎಲ್ ರಾಜ್ಯ ಕಾರ್ಯದರ್ಶಿ ಲೇಖಕ ವೆಂಕಟರಾಜು ಮಾತನಾಡಿದರು. ಐ ಯಸ್ ಎಫ್ ಪ್ರತಿ ವರ್ಷದಂತೆ ಇ ವರ್ಷವೂ ರಾಜ್ಯೋತ್ಸವ ಸನ್ಮಾನ ಕಾರ್ಯಕ್ರಮ ಆಯೋಜಿಸಿತ್ತು. ಸಾಧಕ ಅನಿವಾಸಿ ಕನ್ನಡಿಗರನ್ನ ಗುರುತಿಸಿ ನೀಡುವ ಗೌರವವು ಈ ವರ್ಷ ಮರಳುಗಾಡಿನಲ್ಲಿ ಸಮಾಜಸೇವೆ ಮತ್ತು ಕನ್ನಡಿಗರ ಸಂಕಷ್ಟಗಳಿಗೆ ಸದಾ ಸಹಾಯ ಹಸ್ತ ಚಾಚುತ್ತ ಮುಂದೆ ಬರುವ ಕೊಡುಗೈ ದಾನಿ ಜಾಯ್ ಫೆರ್ನಾಂಡಿಸ್ ಮತ್ತು ಕನ್ನಡಿಗರ ಕಷ್ಟದಲ್ಲಿ ಸದಾ ಸನ್ನದ್ಧ ಸ್ಥಿತಿಯಲ್ಲಿ ನೆರವಾಗುವ  ಅನ್ವರ್ ಸಾದತ್ ರಿಗೆ ನೀಡಿ ಗೌರವಿಸಿತು, ಸನ್ಮಾನಿತರು ಕಾರ್ಯಕ್ರಮದಲ್ಲಿ ತಮ್ಮ ಅನುಭವಗಳನ್ನ ಹಂಚಿಕೊಂಡರು.

ಕೋವಿಡ್ ಸಂಕಷ್ಟದಲ್ಲಿ ಕನ್ನಡಿಗರ ನೆರವಿಗೆ ನಿಂತ ಸಂಸ್ಥೆಗಳಾದ  ಸಾಕೋ ಮತ್ತು ಕೆಎಂಟಿಗೆ ಸಮಾರಂಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜಿಸಲಾಗಿತ್ತು.

ಕರ್ನಾಟಕದ ಸದ್ಯದ ಪರಿಸ್ಥಿತಿಯನ್ನ ಬಿತ್ತುವ ಸೋಶಿಯಲ್ ಫೋರಮ್ ಕಲಾ ತಂಡದ ಪ್ರಹಸನ ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು. ಕರ್ನಾಟಕದ ಇತಿಹಾಸ ಪುರುಷರ ವೇಷ ಧರಿಸಿ ವೇದಿಕೆಯಲ್ಲಿ ಪುಟ್ಟ ಹೆಜ್ಜೆಯಿಟ್ಟ ಪುಟಾಣಿಗಳು ಕಾರ್ಯಕ್ರಮದ ಆಕರ್ಷಣೆಯಾಗಿದ್ದವು. ಕಾರ್ಯಕ್ರಮದ ಅಂಗವಾಗಿ ನೇರಪ್ರಸಾದ ವೀಕ್ಷಕರಿಗೆ ರಸ ಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿತ್ತು. ಇದೆ ಸಂದರ್ಭ ಸಮಾರಂಭದ ಭಾಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧಾ ಕಾರ್ಯಕ್ರಮದ ವಿಜೇತರನ್ನು ಘೋಷಿಸಲಾಯಿತು.

ಐ ಯಸ್ ಎಫ್ ಕೇಂದ್ರ ಸಮಿತಿ ಅಧ್ಯಕ್ಷ ಅಶ್ರಫ್ ಪುತ್ತೂರು, ರಾಜ್ಯ  ಕಾರ್ಯದರ್ಶಿ ಇಮ್ರಾನ್ ಕಾಟಿಪಳ್ಳ ಉಪಾಧ್ಯಕ್ಷ ಸಲಾಹುದ್ದೀನ್ ತುಮಕೂರು, ಫ್ರಟೆರ್ನಿಟಿ ಫೋರಮ್ ದಮ್ಮಾಮ್ ಜಿಲ್ಲಾಧ್ಯಕ್ಷ ಸಾಜಿದ್ ಮತ್ತು ಐಎಸ್ಎಫ್ ವಿವಿಧ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಐಎಸ್ಎಫ್ ಜೊತೆ ಕಾರ್ಯದರ್ಶಿ ನೌಷಾದ್ ಬೋಳಾರ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಇಮ್ರಾನ್ ಕಾಟಿಪಳ್ಳ ವಂದಿಸಿದರು. ಝೈನುದ್ದೀನ್ ಸಜಿಪ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News