ರಾಜ್ಯ ರಾಜಕೀಯದಲ್ಲಿ ಪರಿಶಿಷ್ಟ ಜಾತಿಯೇ ನಿರ್ಣಾಯಕ : ಛಲವಾದಿ ನಾರಾಯಣ ಸ್ವಾಮಿ
ಉಡುಪಿ, ನ.4: ರಾಜ್ಯದಲ್ಲಿ ನಡೆದ ಜಾತಿ ಜನಗಣತಿಯ ಪ್ರಕಾರ ಪರಿಶಿಷ್ಟ ಜಾತಿಯವರು ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆದುದರಿಂದ ರಾಜಕೀಯ ಸೇರಿದಂತೆ ಎಲ್ಲದರಲ್ಲೂ ಪರಿಶಿಷ್ಟ ಜಾತಿಯೇ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಬಗ್ಗೆ ಸಮುದಾಯದ ಪ್ರತಿ ಯೊಬ್ಬರು ಅರಿವು ಹೆಚ್ಚಿಸಿಕೊಂಡು ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾದ ಅಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಹೇಳಿದ್ದಾರೆ.
ಕಡಿಯಾಳಿಯಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ಆಯೋಜಿ ಸಲಾದ ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾದ ಮೊದಲ ವಿಭಾಗ ಮಟ್ಟದ ಸಭೆಯಲ್ಲಿ ಅವರು ಮಾತನಾಡುತಿದ್ದರು.
ಇಂದು ದೇಶದಲ್ಲಿ ರಾಜಕೀಯವೇ ಬಹಳ ದೊಡ್ಡ ವೃತ್ತಿ ಯಾಗಿದೆ. ಮೊದಲು ವ್ಯಾಪಾರವೇ ದೊಡ್ಡ ವೃತ್ತಿಯಾಗಿತ್ತು. ಆದರೆ ಈಗ ರಾಜಕೀಯ ಕ್ಕಿಂತ ಮಿಗಿಲಾದ ವೃತ್ತಿ ಬೇರೊಂದಿಲ್ಲ. ಇಲ್ಲಿ ಹಣ ಹೂಡಿ ೆ ಕೂಡ ತುಂಬಾ ಕಡಿಮೆ ಎಂದರು.
ರಾಜಕಾರಣ ಮತ್ತು ರಾಜನೀತಿಗೆ ಬಹಳಷ್ಟು ವ್ಯತ್ಯಾಸವಿದೆ. ನಾವು ರಾಜ ನೀತಿಯನ್ನು ಬಿಟ್ಟು ರಾಜಕಾರಣವನ್ನು ಮಾಡುತ್ತಿದ್ದೇವೆ. ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಳ್ಳದೇ ಈ ದೇಶವನ್ನು ಅರ್ಥ ಮಾಡಲು ಸಾಧ್ಯವಿಲ್ಲ. ಅವರ ದಾರಿಯಲ್ಲಿ ನಾವೆಲ್ಲ ನಡೆಯಬೇಕಾಗಿದೆ ಎಂದು ಅವರು ತಿಳಿಸಿದರು.
ಸಭೆಯನ್ನು ಉದ್ಘಾಟಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪಕ್ಷದ ಮೋರ್ಚಾಗಳು ಆಯಾ ಸಮುದಾಯ ಮತ್ತು ಕ್ಷೇತ್ರಗಳಲ್ಲಿ ರುವ ಸಮಸ್ಯೆ ಗಳನ್ನು ಅರಿತು ಸರಕಾರದ ಗಮನಕ್ಕೆ ತರುವ ಕೆಲಸ ಮಾಡಬೇಕು. ಸಾಧನೆ ಮಾಡಲು ಸ್ಪಷ್ಟವಾದ ನಿಲುವು ಮುಖ್ಯ. ಅದಕ್ಕೆ ನಮಗೆ ಎಲ್ಲರಿಗೂ ಅಂಬೇಡ್ಕರ್ ಅವರೇ ್ಪೂರ್ತಿ ಎಂದು ಅಭಿಪ್ರಾಯ ಪಟ್ಟರು.
ಉಡುಪಿ ಶಾಸಕ ಕೆ.ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಮೋರ್ಚಾದ ರಾಜ್ಯ ಕಾರ್ಯದರ್ಶಿ ಜಗದೀಶ್, ಜಿಲ್ಲಾಧ್ಯಕ್ಷ ಗೋಪಾಲ ಕಳಿಂಜೆ ಉಪಸ್ಥಿತರಿದ್ದರು.
ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಕಾರ್ಯದರ್ಶಿ ಪರಮಾನಂದ ಕಾರ್ಯಕ್ರಮ ನಿರೂಪಿಸಿದರು