×
Ad

ಉಡುಪಿ ತಾಲೂಕು ಅಕ್ಷರ ದಾಸೋಹ ನೌಕರರ ಸಮಾವೇಶ

Update: 2020-11-04 20:22 IST

ಉಡುಪಿ, ನ.4: ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಸಂಘ ಉಡುಪಿ ತಾಲೂಕು ಸಮಿತಿಯ ವತಿಯಿಂದ ಅಕ್ಷರ ದಾಸೋಹ ನೌಕರರ ಸಮಾವೇಶ ವನ್ನು ಬುಧವಾರ ಉಡುಪಿಯ ವಿಮಾ ನೌಕರರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತಾಡಿ, ನವೆಂಬರ್ 26ರ ಅಖಿಲ ಭಾರತ ಬಿಸಿಊಟ ನೌಕರರ ಮುಷ್ಕರದ ಮಹತ್ವದ ಬಗ್ಗೆ ತಿಳಿಸಿದರು. ನ.9 ಮಣಿಪಾಲದ ಜಿಲ್ಲಾಧಿಕಾರಿ ಕಛೇರಿಯ ಮುಂದೆ ನಡೆಯುವ ಬೃಹತ್ ಪ್ರತಿಭಟನೆಯ ಬಗ್ಗೆ ವಿವರಿಸಿದರು.

ಸಿಐಟಿಯು ಉಡುಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್., ಅಕ್ಷರ ದಾಸೋಹ ಸಂಘದ ಜಿಲ್ಲಾ ಕಾರ್ಯದರ್ಶಿ ಸುನಂದ, ಉಡುಪಿ ತಾಲೂಕು ಕಾರ್ಯದರ್ಶಿ ಕಮಲ, ರತ್ನ, ಗಿರಿಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News