×
Ad

‘ಜಾಗೃತ ಭಾರತ ಸಮೃದ್ಧ ಭಾರತ’ ಅರಿವು ಸಪ್ತಾಹ

Update: 2020-11-04 20:24 IST

ಉಡುಪಿ, ನ.4: ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಸರಕಾರದ ನಿಯಮಾವಳಿಯಂತೆ ಜನಪರವಾಗಿ ಕೆಲಸ ನಿರ್ವಹಿಸಬೇಕು ಹಾಗೂ ಸಾರ್ವಜನಿಕರಿಗೆ ವಿಳಂಬರಹಿತ ಸೇವೆ ನೀಡಿ ಭ್ರಷ್ಟಾಚಾರಕ್ಕೆ ತಳ ಮಟ್ಟದಲ್ಲಿ ಕಡಿವಾಣ ಹಾಕಬೇಕು ಎಂದು ಲೋಕಾಯುಕ್ತ ಉಡುಪಿಯ ಪೊಲೀಸ್ ಉಪಾಧೀಕ್ಷ ಭಾಸ್ಕರ ವಿ.ಬಿ. ಹೇಳಿದ್ದಾರೆ.

ಜಾಗೃತಿ ಅರಿವು ಸಪ್ತಾಹದ ಕಾರ್ಯಕ್ರಮದ ಅಂಗವಾಗಿ ಜಾಗೃತ ಭಾರತ ಸಮೃಧ್ದ ಭಾರತ ಘೋಷವಾಕ್ಯದಡಿ ಜಿಲ್ಲೆಯ ಸರಕಾರಿ ಕಚೇರಿ ಗಳಾದ ನಗರ ಸಭೆ, ಜಿಲ್ಲಾ ಖಜಾನೆ, ಪ್ರಾದೇಶಿಕ ಸಾರಿಗೆ ಕಛೇರಿ, ಉಪನೊಂದಣಿ ಕಛೇರಿ, ಕುಂದಾಪುರ ಪುರಸಭೆ ಹಾಗೂ ತಾಲೂಕು ಕಚೇರಿಗಳಲ್ಲಿ ಭ್ರಷ್ಟಾಚಾರ ತೊಲಗಿಸಿ ಉತ್ತಮ ಆಡಳಿತಕ್ಕಾಗಿ ಪಾರದರ್ಶಕ ನೀತಿಗಳನ್ನು ರೂಪಿಸಿ ಪರಿಣಾಮಕಾರಿ ಯಾಗಿ ಜಾರಿಗೊಳಿಸುವ ಬಗ್ಗೆ ಸರಕಾರಿ ಕಚೇರಿಗಳಲ್ಲಿ ಆಯೋಜಿಸಲಾದ ಜನ ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಕಾರ್ಯಕ್ರಮದಲ್ಲಿ ಅವರು ಸರಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಭ್ರಷ್ಟಾಚಾರ ವಿರೋಧಿ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಪೊಲೀಸ್ ನಿರೀಕ್ಷಕರುಗಳಾದ ರಾಮಚಂದ್ರ ನಾಯಕ್, ರಾಜಶೇಖರ ಎಲ್. ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News