ಯಡ್ತಾಡಿ: ಭತ್ತದಲ್ಲಿ ಯಾಂತ್ರೀಕರಣದ ಪ್ರಾತ್ಯಕ್ಷಿಕೆ
ಉಡುಪಿ, ನ.4: ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಬ್ರಹ್ಮಾವರ, ವಿಜಯ ಗಾ್ರುೀಣಾಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಕೃಷಿ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಭತ್ತದಲ್ಲಿ ಯಾಂತ್ರೀಕರಣದ ಪ್ರಾತ್ಯಕ್ಷಿಕೆಯನ್ನು ಯಡ್ತಾಡಿಯಲ್ಲಿ ನಡೆಸಲಾಯಿತು.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಧನಂಜಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಭತ್ತದಲ್ಲಿ ಯಾಂತ್ರಿಕರಣದಿಂದ ಪಾಳು ಬಿಡುತ್ತಿದ್ದ ಎಷ್ಟೋ ಗದ್ದೆಗಳಲ್ಲಿ ಮತ್ತೆ ಕೃಷಿ ಮಾಡಲು ಸಾದ್ಯವಾಗಿದೆ. ಯಾಂತ್ರೀಕರಣದತ್ತ ಹೆಚ್ಚು ಯುವಕರು ಮತ್ತೆ ಆಕರ್ಷಿತರಾಗುತ್ತಿದ್ದು, ಇದರಿಂದ ಭತ್ತದ ಸಾಗುವಳಿ ಪ್ರದೇಶವು ಹೆಚ್ಚಾಗಿದೆ ಎಂದರು.
ಕೋಟ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಚಂದ್ರಶೇಖರ ಶೆಟ್ಟಿ, ಪ್ರಗತಿಪರ ರೈತ ಶಿರಿಯಾರ ನಿತ್ಯಾನಂದ ಶೆಟ್ಟಿ, ಬಾರ್ಕೂರು ಕೂಡ್ಲಿಯ ಶ್ರೀನಿವಾಸ ಉಡುಪ, ಜಂಬೂರು ಕೃಷ್ಣ ಅಡಿಗ, ನರಸಿಂಹ ನಾಯ್ಕ ಯಡ್ತಾಡಿ, ದೇವಣ್ಣ ನಾಯ್ಕ ಯಡ್ತಾಡಿ, ಫಿರೂಕ್ ಸಾಹೇಬ್ ಯಡ್ತಾಡಿ, ಸಾಕ್ಷ್ಯ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.