ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
Update: 2020-11-04 21:20 IST
ಕಾರ್ಕಳ, ನ.4: ಸಕ್ಕರೆ ಕಾಯಿಲೆ ಹಾಗೂ ಅಸ್ತಮಾದಿಂದ ಬಳಲುತ್ತಿದ್ದ ಕಾರ್ಕಳ ಹವಾಲ್ದಾರ್‌ಬೆಟ್ಟು ನಿವಾಸಿ ಕೆ.ವಿಜಯಲಕ್ಮೀ ಕಿಣಿ (67) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ನ.4ರಂದು ಮಧ್ಯಾಹ್ನ ಮನೆಯ ಮೊದಲನೆಯ ಮಹಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ: ತಂದೆ ತಾಯಿ ಮರಣದ ಬಗ್ಗೆ ಮಾನಸಿಕವಾಗಿ ನೊಂದು ಹಾಗೂ ವಿಪರೀತ ಕುಡಿತದ ಚಟದಿಂದ ಜೀವವದಲ್ಲಿ ಜಿಗುಪ್ಸೆಗೊಂಡ ಯಡ್ತಾಡಿ ಗ್ರಾಮದ ಅಲ್ತಾರು ನಿವಾಸಿ ಮನೋಜ್ (28) ಎಂಬವರು ನ.3 ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.