×
Ad

ನ. 22ರಿಂದ ತುಳು ಯಕ್ಷ ಜಾತ್ರೆ

Update: 2020-11-04 21:27 IST

ಮಂಗಳೂರು, ನ.4: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ಯಕ್ಷಬೊಳ್ಳಿ ಅಭಿಮಾನಿ ಬಳಗ ಮತ್ತು ದೈಜಿವರ್ಲ್ಡ್ ಸಹಯೋಗದೊಂದಿಗೆ ‘ತುಳು ಯಕ್ಷಜಾತ್ರೆ’ಯು ನ.22ರಿಂದ 29ರವರೆಗೆ ತುಳು ಸಾಹಿತ್ಯ ಅಕಾಡಮಿಯ ತುಳು ಭವನದ ಸಿರಿ ಚಾವಡಿಯಲ್ಲಿ ಪ್ರತಿ ದಿನ ಮಧ್ಯಾಹ್ನ 2 ಗಂಟೆಯಿಂದ ನಡೆಯಲಿದೆ ಎಂದು ಅಕಾಡಮಿಯ ಅಧ್ಯಕ್ಷ ದಯಾನಂದ ಜಿ.ಕತ್ತಲ್‌ಸಾರ್ ಹೇಳಿದರು.

ಬುಧವಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಅತಿಥಿಗಳಾಗಿ ನಮ್ಮ ಕುಡ್ಲ ಚಾನೆಲ್‌ನ ನಿರೂಪಕಿ ಡಾ.ಪ್ರಿಯಾ ಹರೀಶ್, ಯಕ್ಷಗಾನ, ನಾಟಕ, ಸಿನಿಮಾ, ರಚನೆಕಾರರಾದ ಜಿ.ಕೆ. ಶ್ರೀನಿವಾಸ ಸಾಲ್ಯಾನ್ ಬೋಂದೆಲ್, ಯಕ್ಷಗಾನ ಭಾಗವತರಾದ ದಯಾನಂದ ಕೋಡಿಕಲ್, ಅಕಾಡಮಿಯ ಸದಸ್ಯರಾದ ನಾಗೇಶ್ ಕುಲಾಲ್, ಯಕ್ಷಬೊಳ್ಳಿ ಕಡಬ ದಿನೇಶ್ ರೈ, ಚೇತಕ್ ಪೂಜಾರಿ, ಸಿನಿಮಾ ನಿರ್ದೇಶಕ ಪ್ರಶಾಂತ್ ಸಿ.ಕೆ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News