×
Ad

ಕಾರ್ಕಳ: ಬಾವಿಗೆ ಬಿದ್ದ ಗೊಬ್ಬರ ತುಂಬಿದ್ದ ಲಾರಿ

Update: 2020-11-04 21:43 IST

ಕಾರ್ಕಳ : ಕಾರ್ಕಳ ನಗರದ ಪಾಲಡ್ಕ ಪೆಟ್ರೊಲ್ ಪಂಪ್ ಬಳಿ ನ. 3ರಂದು ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಬಾವಿಗೆ ಬಿದ್ದ ಘಟನೆ ನಡೆದಿದ್ದು, ಬಾವಿಯಿಂದ ಲಾರಿಯನ್ನು ಬುಧವಾರ ಕ್ರೈನ್ ಬಳಸಿ ಮೇಲಕ್ಕೆ ಎತ್ತಲಾಗಿದೆ. ಬುಧವಾರ ಸಂಜೆ ವೇಳೆಗೆ ಲಾರಿಯನ್ನು ಬಾವಿಯಿಂದ  ಮೇಲಕ್ಕೆ ಎತ್ತಲಾಯಿತು.

ಲಾರಿ ಮಂಗಳೂರಿನಿಂದ ಗೊಬ್ಬರ ಹೇರಿಕೊಂಡು ಕಾರ್ಕಳಕ್ಕೆ ಬಂದಿತ್ತು. ರಾತ್ರಿ ಲಾರಿಯನ್ನು ರಿವರ್ಸ್ ತೆಗೆಯುವ ಸಂದರ್ಭ ಇಲ್ಲಿನ‌ ಪೆಟ್ರೊಲ್ ಪಂಪ್ ಪಕ್ಕದ ಟಿಎಪಿಎಂಎಸಿ  ಹಿಂಬದಿಯ ಬಾವಿಗೆ ಬಿದ್ದಿತ್ತು. ಚಾಲಕ ಪ್ರಾಣಾಪಯದಿಂದ ಪಾರಾಗಿದ್ದರು. ಲಾರಿಯಲ್ಲಿದ್ದ ಗೊಬ್ಬರ ಬಾವಿ ಪಾಲಾಗಿದೆ. ನೀರು ಗೊಬ್ಬರ, ಡೀಸೆಲ್ ಆಯಿಲ್ ಮಿಶ್ರಣದಿಂದ ಮಲೀನವಾಗಿದೆ. ಬಾವಿ ನೀರು ಬಳಕೆಗೆ ಅಯೋಗ್ಯವಾಗಿದೆ.

ಲಾರಿ ರಿವರ್ಸ್ ತರುವ ವೇಳೆ ನಿರ್ವಾಹಕ ಕೂಡ ಇರಲಿಲ್ಲ ಇದು ಅವಘಡಕ್ಕೆ ಕಾರಣ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News