ಅಲ್ ಮದೀನ : ಬಡ ಸಾದಾತ್ ಕುಟುಂಬಗಳಿಗೆ ಕಿಟ್ ವಿತರಣೆ

Update: 2020-11-04 16:18 GMT

ನರಿಂಗಾನ:  ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ ಆಶ್ರಯದಲ್ಲಿ ಸ್ಥಾಪಿಸಲಾದ 'ಶರಫುಲ್ ಉಲಮಾ ಮೆಮೋರಿಯಲ್ ಸಾದಾತ್ ಫೌಂಡೇಶನ್' ಇದರ ಉದ್ಘಾಟನೆ ಮತ್ತು ಬಡ ಸಾದಾತ್ ಗಳ ಕುಟುಂಬಕ್ಕೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮವು ಸಂಸ್ಥೆಯ ಕಾರ್ಯದರ್ಶಿ ಸಯ್ಯಿದ್ ಇಸ್ಮಾಯಿಲ್ ತಂಙಳ್ ಅಲ್ ಹಾದೀ ಉಜಿರೆ ಇವರ ಅಧ್ಯಕ್ಷತೆಯಲ್ಲಿ ಅಲ್ ಮದೀನದ  ಶರಫುಲ್ ಉಲಮಾ ಮಕ್ಬರ ವಠಾರದಲ್ಲಿ ಬುಧವಾರ ನಡೆಯಿತು.

ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿ ಇದಕ್ಕಾಗಿ  ಮುತುವರ್ಜಿ ವಹಿಸಿದ ಕಾರ್ಯಕರ್ತರು ಹಾಗೂ  ಕೈಜೋಡಿಸಿದ ದಾನಿಗಳನ್ನು ಅಭಿನಂದಿಸಿದರು. ಸಂಸ್ಥೆಯ ಕೋಶಾಧಿಕಾರಿ ಮಜೀದ್ ಹಾಜಿ ಮುಂಬೈ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ 50 ಬಡ ಸಾದಾತ್ ಕುಟುಂಬಗಳಿಗೆ ಕಿಟ್ ವಿತರಿಸಲಾಯಿತು. ಮುಹಮ್ಮದ್ ಕುಂಞಿ  ಅಮ್ಜದಿ, ಮುದರ್ರಿಸ್ ಅಬ್ದುಲ್ಲ ಅಹ್ಸನಿ, ಮುನೀರ್ ಕಾಮಿಲ್ ಸಖಾಫಿ, ಖುಬೈಬ್ ತಂಙಳ್ ಉಳ್ಳಾಲ, ಹಾಜಿ ಎನ್.ಎಸ್.ಕರೀಂ,  ಅಲ್ ಮದೀನ ನ್ಯಾಷನಲ್ ಕಮಿಟಿಯ ಉಸ್ಮಾನ್ ಹಾಜಿ ಮಂಜನಾಡಿ, ಕುವೈಟ್ ಕಮಿಟಿಯ ಇಸ್ಮಾಯಿಲ್ ಪಂಜಲ, ಇಲ್ಯಾಸ್ ಮೋಂಟುಗೋಳಿ, ಮುಹಮ್ಮದ್ ಹಾಜಿ ಕೆ.ಸಿ.ರೋಡ್ ಕುವೈಟ್, ಜಾಫರ್ ಉಳ್ಳಾಲ,  ಶೌಕತ್ ಹಾಜಿ ದೇರಳಕಟ್ಟೆ, ಕುಂಞಿ ಬಾವ ಹಾಜಿ ಕಲ್ಕಟ್ಟ, ಅಬುಧಾಬಿ ಸಮಿತಿಯ ಪುತ್ತಿಚ್ಚ ಮೋರ್ಲ, ಮೊಯ್ದಿನ್ ಹಾಜಿ ಮಲಾಝ್, ಅಬ್ದುಲ್ ರಝಾಕ್ ಮಾಸ್ಟರ್, ಅಬ್ದುಲ್ ಖಾದರ್ ಝುಹ್ರಿ, ಮುಂತಾದವರು ಉಪಸ್ಥಿತರಿದ್ದರು.

ಇಕ್ಬಾಲ್ ಮರ್ಝೂಖಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News