ನ್ಯೂಯಾರ್ಕ್ ರಾಜ್ಯದ ಅಸೆಂಬ್ಲಿ ಚುನಾವಣೆ ಗೆದ್ದ ಭಾರತದ ಖ್ಯಾತ ನಿರ್ದೇಶಕಿ ಮೀರಾ ನಾಯರ್ ಪುತ್ರ

Update: 2020-11-05 09:04 GMT

ನ್ಯೂಯಾಕ್ : ಭಾರತದ ಖ್ಯಾತ ನಿರ್ದೇಶಕಿ ಮೀರಾ ನಾಯರ್ ಅವರ ಪುತ್ರ ಭಾರತೀಯ-ಯುಗಾಂಡನ್ ಸಂಜಾತ ಝೊಹ್ರಾನ್ ಕ್ವಾಮೆ ಮಮ್ದಾನಿ ಅವರು ನ್ಯೂಯಾರ್ಕ್ ರಾಜ್ಯದ ಅಸೆಂಬ್ಲಿ  ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ನ್ಯೂಯಾರ್ಕ್ ನಿಂದ ಗೆದ್ದಿರುವ  ಭಾರತೀಯ ಮೂಲದ ಇಬ್ಬರಲ್ಲಿ ಇವರೊಬ್ಬರಾಗಿದ್ದಾರೆ.

ಡೆಮಾಕ್ರೆಟಿಕ್ ಅಭ್ಯರ್ಥಿಯಾಗಿದ್ದ 29 ವರ್ಷದ ಮಮ್ದಾನಿ ಅವರು ಈ ಕುರಿತು ಟ್ವೀಟ್ ಮಾಡಿದ್ದಾರೆ. "ಇದು ಅಧಿಕೃತ. ನಾವು ಗೆದ್ದಿದ್ದೇವೆ. ನಾನು ಶ್ರೀಮಂತರಿಗೆ ತೆರಿಗೆ ವಿಧಿಸಲು, ಬಡವರಿಗೆ  ಸಹಾಯ ಮಾಡಲು, ಮನೆಗಳನ್ನು ನಿರ್ಮಿಸಲು  ಹಾಗೂ ಸೋಶಿಯಲಿಸ್ಟ್ ನ್ಯೂಯಾರ್ಕ್ ನಿರ್ಮಿಸುತ್ತೇನೆ,'' ಎಂದು ಅವರು ಹೇಳಿದ್ದಾರೆ.

ಇಪ್ಪತ್ತೊಂಬತ್ತು ವರ್ಷದ ಡೆಮಾಕ್ರೆಟಿಕ್ ಅಭ್ಯರ್ಥಿಯಾಗಿರುವ ಮಮ್ದಾನಿ ಅವರು 36ನೇ ಅಸೆಂಬ್ಲಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ಜೂನ್ ತಿಂಗಳಲ್ಲಿ ನಡೆದ ಪ್ರೈಮರಿ ಚುನಾವಣೆಯಲ್ಲಿ ಅವರು ಹಾಲಿ ಅಸೆಂಬ್ಲಿ ಸದಸ್ಯ ಅರವೆಲ್ಲಾ ಸಿಮೊಟಸ್ ಅವರನು ಸೋಲಿಸಿದ್ದರು. ಈ ಕಾರಣದಿಂದ ಅವರು ಮಂಗಳವಾರ ರಾತ್ರಿ ನ್ಯೂಯಾರ್ಕ್ ನಗರದ  ಚುನಾವಣೆಗಳು ಅಂತ್ಯವಾದಂತೆ ವಿಜೇತರೆಂದು ಪರಿಗಣಿತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News