×
Ad

ಟಿವಿ ಹಾಸ್ಯ ಕಾರ್ಯಕ್ರಮ : 'ಪ್ರೈವೇಟ್ ಚಾಲೆಂಜ್' ಗೆ 25 ಕಂತುಗಳ ಸಂಭ್ರಮ

Update: 2020-11-05 17:14 IST

ಮಂಗಳೂರು: ಕರಾವಳಿಗರಲ್ಲಿ ಹಾಗೂ ಕರಾವಳಿ ನಂಟಿರುವ ದೇಶ ವಿದೇಶಗಳಲ್ಲಿನ ತುಳು, ಕನ್ನಡ, ಕೊಂಕಣಿ, ಬ್ಯಾರಿ ಭಾಷಿಗರನ್ನು ನೆಚ್ಚಿಕೊಂಡಿರುವ ಟಿವಿ ಹಾಸ್ಯ ಕಾರ್ಯಕ್ರಮ ದೈಜಿವರ್ಲ್ಡ್ ವಾಹಿನಿಯಲ್ಲಿ ಪ್ರತಿ ರವಿವಾರ ಪ್ರಸಾರವಾಗುವ 'ಪ್ರೈವೇಟ್ ಚಾಲೆಂಜ್' ನಡೆಸಲಾಗುತ್ತಿದೆ. 

ಲಾಕ್ ಡೌನ್ ಸಂದರ್ಭದಲ್ಲಿ ಮನೆಗಳೊಳಗೆ ಕುಳಿತುಕೊಳ್ಳಲು ನಿಬಂ೯ಧಿತರಾದ ವೀಕ್ಷಕರ ಮನೋಸ್ಯೆರ್ಯವನ್ನು ಹೆಚ್ಚಿಸಿ ಮನೋರಂಜನೆಯನ್ನು ನೀಡುವ ಸಲುವಾಗಿ ತುಳುನಾಡ ಮಾಣಿಕ್ಯ ಎಂದೇ ಕರೆಯಲ್ಪಡುವ ನಾಟಕ, ಚಿತ್ರನಟ ಅರವಿಂದ್ ಬೋಳಾರ್ ಅವರೊಂದಿಗೆ ದೈಜಿವರ್ಲ್ಡ್ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ 'ಪೈವೇಟ್ ಚಾಲೆಂಜ್' ಕಾರ್ಯಕ್ರಮಕ್ಕೆ ಮುನ್ನುಡಿ ಬರೆದಿದ್ದರು.

ಸ್ವತ: ವಾಲ್ಟರ್ ನಂದಳಿಕೆ ಓರ್ವ ವಾಹಿನಿ ಸಂದರ್ಶಕರಾಗಿ ಹಾಗೂ ಅರವಿಂದ್ ಬೋಳಾರ್ ಸಮಾಜಿಕವಾಗಿ ಚಿರಪರಿಚಿತರಾದ ಕೆಲ ವ್ಯಕ್ತಿಗಳ ಪಾತ್ರಗಳಲ್ಲಿ ಅತಿಥಿಯಾಗಿ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರತಿ ರವಿವಾರ ರಾತ್ರಿ 9 ಗಂಟೆಗೆ ದೈಜಿವರ್ಲ್ಡ್ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮವು ಸಂಪೂರ್ಣ ಹಾಸ್ಯದೊಂದಿಗೆ ಕೂಡಿದ್ದು ಜೊತೆಗೆ ಸಾಮಾಜಿಕ, ರಾಜಕೀಯ ಹಾಗೂ ಆಡಳಿತ ವೈಫಲ್ಯಗಳ ಮೇಲೆ ತಿಳಿ ವಿಮರ್ಶೆಯನ್ನೂ ಪ್ರಸ್ತುತಪಡಿಸುತ್ತಿದೆ.

ಜೈವೇಟ್ ಚಾಲೆಂಜ್ ಕಾರ್ಯಕ್ರಮದಲ್ಲಿ ಅರವಿಂದ್ ಬೋಳಾರ್ ಈ ವರೆಗೆ 24 ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ತಮ್ಮ ಸ್ವತ:ಸಿದ್ಧಿ ಸಂಭಾಷಣೆಯಿಂದಾಗಿ ವೀಕ್ಷಕರನ್ನು ಪ್ರತಿ ವಾರ ಕಾರ್ಯಕ್ರಮ ವೀಕ್ಷಣೆಗೆ ಹಾತೊರೆಯುವಂತೆ ಮಾಡಲು ಸಫಲರಾಗಿದ್ದಾರೆ. ಇದೀಗ ಕಾರ್ಯಕ್ರಮದ 25 ನೇ ಕಂತಿನಲ್ಲಿ ಅರವಿಂದ್ ಬೋಳಾರ್ ಹಾಗೂ ವಾಲ್ಟರ್ ನಂದಳಿಕೆ ವೀಕ್ಷಕರೊಂದಿಗೆ ನೇರ ಮಾತುಕತೆಗೆ ತಯಾರಾಗಿದ್ದಾರೆ.

ಲಕ್ಷಾಂತರ ವೀಕ್ಷಕರ ಮನಗೆದ್ದ ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವುದರೊಂದಿಗೆ ವೀಕ್ಷಕರ ಮಾತುಗಳನ್ನು ಆಲಿಸಲು ತಯಾರಾಗಿದ್ದಾರೆ. ಈ ರವಿವಾರ ಪೈವೇಟ್ ಚಾಲೆಂಜ್ ಕಾರ್ಯಕ್ರಮವು ರಾತ್ರಿ 8:30ಕ್ಕೆ ಆರಂಭವಾಗಲಿದ್ದು, ಹತ್ತು ಗಂಟೆಯ ವರೆಗೆ ಮುಂದುವರೆಯಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News