ಹೆಜಮಾಡಿ : ಈಜಲು ಹೋದ ಯುವಕರು ನೀರು ಪಾಲು
Update: 2020-11-05 19:23 IST
ಪಡುಬಿದ್ರಿ : ನೀರಿನಲ್ಲಿ ಮುಳುಗಿ ಯುವಕರಿಬ್ಬರು ಮೃತಪಟ್ಟ ಘಟನೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ಹೆಜಮಾಡಿಯಲ್ಲಿ ಸಂಭವಿಸಿದೆ.
ಹೆಜಮಾಡಿ ಎನ್.ಎಸ್ ರಸ್ತೆಯ ಮೋಸಿನ್ (16) ಹಾಗು ಎಸ್.ಎಸ್.ರಸ್ತೆ ನಿವಾಸಿ ಮುಹಮ್ಮದ್ ರಾಯಿಸ್ (16) ಎಂಬವರೇ ಮೃತಪಟ್ಟವರು.
ಹೆಜಮಾಡಿ ಕಾಮಿನಿ ಹೊಳೆ ಹಾಗೂ ಸಮುದ್ರ ಸೇರುವ ಮುಟ್ಟಲಿವೆ ಬಳಿ ಮೂವರು ಯುವಕರು ನೀರಿಗಿಳಿದು ಈಜುತ್ತಿದ್ದಂತೆ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮುಹಮ್ಮದ್ ನಬೀಲ್ ಎಂಬಾತನನ್ನು ರಕ್ಷಿಸಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.