ನ. 6: ಅಮೆಮ್ಮಾರ್ ಮಸೀದಿ ವತಿಯಿಂದ ಮಿಲಾದ್ ಸಂದೇಶದ ಪ್ರಯುಕ್ತ 'ಮಾದಕ ವಸ್ತು ವಿರೋಧಿ ಅಭಿಯಾನ'

Update: 2020-11-05 14:30 GMT

ಫರಂಗಿಪೇಟೆ : ಬದ್ರಿಯಾ ಮದರಸ ಮತ್ತು ಜುಮಾ ಮಸೀದಿ ಅಮೆಮ್ಮಾರ್ ಇದರ ವತಿಯಿಂದ ಮಿಲಾದ್ ಸಂದೇಶ ಪ್ರಯುಕ್ತ, "ನಮ್ಮ ನಡೆ ಒಳಿತಿನ ಕಡೆಗೆ" ಎಂಬ ದ್ಯೇಯ ವಾಕ್ಯದಲ್ಲಿ  ಮಾದಕ ವಸ್ತು ವಿರೋಧಿ ಅಭಿಯಾನ ಕಾರ್ಯಕ್ರಮ ನ.6 ರಂದು ಅಮೆಮ್ಮಾರ್ ಮಸೀದಿ ವಠಾರದಲ್ಲಿ ನಡೆಯಲಿದೆ.

ಅಂದು 2:30 ಕ್ಕೆ ಅಮೆಮ್ಮಾರ್ ವ್ಯಾಪ್ತಿಯಲ್ಲಿ ಮಾದಕ ವಸ್ತು ವಿರೋಧಿ ಜನ ಜಾಗೃತಿ ಜಾಥಾ ನಡೆಯಲಿದೆ. ಸಂಜೆ 4 ಗೆಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ  ಸಭಾ ಅಧ್ಯಕ್ಷತೆಯನ್ನು ಮಸೀದಿ ಅಧ್ಯಕ್ಷ ಉಮರಬ್ಬ ಎ. ಎಸ್. ಬಿ ವಹಿಸಲಿದ್ದಾರೆ. ಖತೀಬ್ ಅಬ್ದುಲ್ ಲೇತಿಫ್ ಹನೀಫಿ ದುವಾಗೈಯಲಿದ್ದಾರೆ,  ಶಾಸಕ ಯುಟಿ ಖಾದರ್ ಮಾದಕ ವಿರೋಧಿ ಅಭಿಯಾನದ ಕರಪತ್ರ ಬಿಡುಗಡೆ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ  ಪರ್ಲಿಯಾ ಜುಮ್ಮಾ ಮಸೀದಿ ಖತೀಬ್ ಅಷ್ಫಾಕ್ ಫೈಝಿ, ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ ಐ ಪ್ರಸನ್ನ ಎಮ್.ಎಸ್,  ಸಾಮಾಜಿಕ ಮುಖಂಡರಾದ ರಫೀಕ್ ಮಾಸ್ಟರ್, ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪ್ಪಳ್ಳ,  ಪಾಪ್ಯುಲರ್ ಫ್ರಂಟ್ ಬಂಟ್ವಾಳ ತಾಲೂಕು ಸಮಿತಿ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಕಲ್ಲಡ್ಕ, ಸಾಮಾಜಿಕ ಮುಖಂಡರಾದ ಹನೀಫ್ ಕಾನ್ ಕೊಡಾಜೆ, ನಿವೃತ ಉಪಾನ್ಯಾಸಕ ಬಿಎಮ್ ಮೊಹಮ್ಮದ್, ನ್ಯಾಯವಾದಿ ಕಬೀರ್ ಬಂಟ್ವಾಳ ಭಾಗವಹಿಸಲಿದ್ದಾರೆ ಎಂದು ಮಸೀದಿ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News