×
Ad

ವಿದ್ಯುತ್ ದರ ಏರಿಕೆಗೆ ಕಾಂಗ್ರೆಸ್ ಖಂಡನೆ

Update: 2020-11-05 20:31 IST

ಉಡುಪಿ, ನ.5: ಉಪಚುನಾವಣೆ ಮುಗಿಯುತ್ತಿದ್ದಂತೆ ಬಿಜೆಪಿ ಸರಕಾರ ರಾಜ್ಯದ ಜನತೆಗೆ ಕರೆಂಟ್ ಶಾಕ್ ನೀಡಿದ್ದು, ವಿದ್ಯುತ್ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿರುವುದು ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ.

ಪ್ರತೀ ಯುನಿಟ್ ವಿದ್ಯುತ್‌ಗೆ ಸರಾಸರಿ 40 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. ಈಗಾಗಲೇ ಕೋವಿಡ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜನತೆಗೆ ವಿದ್ಯುತ್ ದರ ಏರಿಕೆಯಿಂದ ಇನ್ನಷ್ಟು ಹೊರೆ ಬೀಳಲಿದೆ. ತನ್ನ ಅಸಮರ್ಪಕ ಆರ್ಥಿಕ ನೀತಿಯಿಂದ ರಾಜ್ಯ ಸರಕಾರ ತನ್ನ ಆದಾಯ ಕೊರತೆ ಯನ್ನು ನಿವಾರಿಸಲು ಜನರ ಮೇಲೆ ನಿರಂತರ ಬೆಲೆ ಏರಿಕೆಯ ಹೊರೆಯನ್ನು ಹೊರೆಸುತ್ತಿರುವುದು ಸರಕಾರದ ವೈಫಲ್ಯವನ್ನು ತೋರಿಸುತ್ತದೆ ಎಂದವರು ಹೇಳಿಕೆ ಯಲ್ಲಿ ತಿಳಿಸಿದ್ದಾರೆ.

ಈ ನಡುವೆ 30 ಯುನಿಟಿಗೆ ದರ ನಿಗದಿ ಇದ್ದ ಮೊದಲ ಸ್ಲಾಬನ್ನು 50ಕ್ಕೆ ಏರಿಸಬೇಕೆಂಬ ಜನತೆಯ ಬೇಡಿಕೆಯನ್ನು ಸರಕಾರ ತಿರಸ್ಕರಿಸಿದ್ದು, ಸರಕಾರ ಜನರ ಬೇಡಿಕೆಗೆ ಯಾವ ಸ್ಪಂದನೆಯನ್ನೂ ತೋರದೇ ಜನ ವಿರೋಧಿ ನಿಲುವನ್ನು ತಳೆಯುತ್ತಿದೆ ಎಂದು ಅಶೋಕ್ ಕುಮಾರ್ ಕೊಡವೂರು ಸರಕಾರದ ಆಡಳಿತ ವೈಖರಿಯನ್ನು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News