ಐಟಿಐ ಸೇರ್ಪಡೆ: ಅವಧಿ ವಿಸ್ತರಣೆ
Update: 2020-11-05 21:33 IST
ಮಂಗಳೂರು, ನ. 5: ಪ್ರಸಕ್ತ ಸಾಲಿನಲ್ಲಿ 2 ವರ್ಷಗಳ ಐಟಿಐ/ದ್ವಿತೀಯ ಪಿ.ಯು.ಸಿ.(ವಿಜ್ಞಾನ)/ದ್ವಿತೀಯ ಪಿಯುಸಿ (ತಾಂತ್ರಿಕ ವಿಷಯಗಳು) ಉತ್ತೀರ್ಣರಾದ ಅಭ್ಯರ್ಥಿಗಳಿಗೆ 3ನೇ ಸೆಮಿಸ್ಟರ್ 2ನೇ ವರ್ಷ ಡಿಪ್ಲೊಮಾ ಪ್ರವೇಶ ಸಂಸ್ಥೆಯಲ್ಲಿ ಖಾಲಿ ಉಳಿದಿರುವ ಸೀಟುಗಳನ್ನು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಸೀಟು ಸಿಗದಿರುವ ವಿದ್ಯಾರ್ಥಿಗಳಿಗೆ ಹಾಗೂ 2 ವರ್ಷಗಳ ಐಟಿಐ/ದ್ವಿತೀಯ ಪಿಯುಸಿ.(ವಿಜ್ಞಾನ)/ ದ್ವಿತೀಯ ಪಿಯುಸಿ (ತಾಂತ್ರಿಕ ವಿಷಯಗಳು) ಉತ್ತೀರ್ಣ ಹೊಂದಿದ ವಿದ್ಯಾರ್ಥಿಗಳಿಗೆ ಆಫ್-ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ನ.14ರವರೆಗೆ ವಿಸ್ತರಿಸಲಾಗಿದೆ.
ಅರ್ಜಿ ನಮೂನೆ ಹಾಗೂ ಮಾಹಿತಿಗಾಗಿ ಕೆಪಿಟಿ ಮಂಗಳೂರು ಅಥವಾ ದೂ.ಸಂ: 0824-2211636 ನ್ನು ಸಂಪರ್ಕಿಬಹುದು ಎಂದು ಪ್ರಕಟನೆ ತಿಳಿಸಿದೆ.