×
Ad

ನ. 7ರಂದು ಕುದ್ರೋಳಿಯಲ್ಲಿ ಮೌಲಿದ್ ಕಾರ್ಯಕ್ರಮ

Update: 2020-11-05 21:52 IST

ಮಂಗಳೂರು : ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿರುವ ಪ್ರವಾದಿ ಜನ್ಮ ಮಾಸಾಚರಣೆಯ ಪ್ರಯುಕ್ತ ಹಝ್ರತ್ ಖಾದರ್ ಷಾ ವಲಿಯುಲ್ಲಾಹಿ (ಖ ಸಿ) ದರ್ಗಾ ಶರೀಫ್ ನಲ್ಲಿ ನ. 7ರಂದು ಇಶಾ ನಮಾಝ್ ಬಳಿಕ ಗ್ರಾಂಡ್ ಮೌಲಿದ್ ಮಜ್ಲಿಸ್ ನಡೆಯಲಿದೆ.

ನಡುಪಳ್ಳಿ ಖತೀಬ್ ರಿಯಾಝ್ ಪೈಝಿ ಅವರ ನೇತೃತ್ವದಲ್ಲಿ ನಡೆಯುವ ಮೌಲಿದ್ ಕಾರ್ಯಕ್ರಮದಲ್ಲಿ ಮಸ್ಜಿದುತ್ತಖ್ವ ಪಂಪ್ ವೆಲ್ ಉಸ್ತಾದ್ ಇಬ್ರಾಹಿಮ್ ಮುಸ್ಲಿಯಾರ್, ಕಾಟಿಪಳ್ಳ ಮುನೀರ್ ಮತ್ತು ಖಾದರ್ ಅವರು ಮೌಲಿದ್ ಆಲಾಪಣೆ ನಡೆಸುವರು.

ಕಾರ್ಯಕ್ರಮದಲ್ಲಿ ಮೊಹಿದೀನ್ ಮಸೀದಿ ಖತೀಬ್ ಮುಹಮ್ಮದ್ ಬಾಖವಿ, ಕಂಡತ್ಪಳ್ಳಿ ಖತೀಬ್ ಪಿಎ ಮುಹಮ್ಮದ್ ರಫೀಕ್ ಮದನಿ ಕಾಮಿಲ್ ಸಖಾಫಿ, ನಡುಪಳ್ಳಿ ಅಧ್ಯಕ್ಷ ಪಝಲ್ ಮುಹಮ್ಮದ್, ಕಾರ್ಪೋರೇಟರ್ ಗಳಾದ ಸಂಶುದ್ದೀನ್, ಅಬ್ದುಲ್ ಲತೀಪ್ ಕಂದಕ್, ಶಂಸುದ್ದೀನ್ ಕಂಡತ್ಪಳ್ಳಿ, ಮಾಜಿ ಕಾರ್ಪೊರೇಟರ್ ಬಿ ಅಬೂಬಕರ್, ಅಬ್ಬುಲ್ ಅಝೀಝ್, ದರ್ಗಾ ಅಧ್ಯಕ್ಷ ಮುಸ್ತಾಕ್, ಮತ್ತು ಅಲ್ತಾಪ್, ನವಾಝ್, ಅಬ್ದುಲ್ಲಾ, ಆಸಿಫ್, ಗಫೂರ್, ಅಶ್ರಫ್, ಯೂಸುಫ್, ಆರಿಫ್, ಬಶೀರ್ ಹಾಗು ಇನ್ನಿತರ ಉಲಮಾ, ಉಮರಾ ನಾಯಕರು ಭಾಗವಹಿಸುವರು ಎಂದು ದರ್ಗಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News