×
Ad

ಟ್ರಂಪ್‍ಗೆ ಅವರದ್ದೇ ಮಾತುಗಳಲ್ಲಿ ತಿರುಗೇಟು ನೀಡಿದ ಗ್ರೆಟಾ ತನ್‌ಬರ್ಗ್

Update: 2020-11-06 16:23 IST

ವಾಷಿಂಗ್ಟನ್ : ಕಳೆದ ವರ್ಷ ತಾನು ಟೈಮ್ ಮ್ಯಾಗಜೀನ್‍ನ ವರ್ಷದ ವ್ಯಕ್ತಿಯಾಗಿ ಆಯ್ಕೆಯಾದಾಗ ತನ್ನನ್ನು ಹಂಗಿಸಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪರಿಸರ ಹೋರಾಟಗಾರ್ತಿ 17 ವರ್ಷದ ಗ್ರೆಟಾ ತನ್‌ಬರ್ಗ್ "ಚಿಲ್ ಡೊನಾಲ್ಡ್ ಚಿಲ್'' ಎಂಬ ಅವರದ್ದೇ ಮಾತುಗಳ ಮೂಲಕ ತಿರುಗೇಟು ನೀಡಿದ್ದಾರೆ. 

ಮತದಾನದಲ್ಲಿ ವಂಚನೆಯಾಗಿದೆ ಎಂದು ಆರೋಪಿಸಿ "ಸ್ಟಾಪ್ ದಿ ಕೌಂಟ್'' ಎಂದು ಮತ ಎಣಿಕೆ ನಿಲ್ಲಿಸಲು ಹೇಳಿ ಟ್ರಂಪ್ ಮಾಡಿದ ಟ್ವೀಟ್ ಕುರಿತಂತೆ ಪ್ರತಿಕ್ರಿಯಿಸಿದ ಗ್ರೆಟಾ, "ಎಷ್ಟೊಂದು ಹಾಸ್ಯಾಸ್ಪದ, ಡೊನಾಲ್ಡ್ ಟ್ರಂಪ್ ಅವರು ತಮ್ಮ ಆಕ್ರೋಶವನ್ನು ಹದ್ದುಬಸ್ತಿನಲ್ಲಿಡಲು ಯತ್ನಿಸಬೇಕು ಹಾಗೂ ನಂತರ ಸ್ನೇಹಿತರೊಬ್ಬರೊಂದಿಗೆ ಓಲ್ಡ್ ಫ್ಯಾಶನ್ಸ್ ಸಿನೆಮಾ ನೋಡಲು ತೆರಳಬೇಕು. ಚಿಲ್, ಡೊನಾಲ್ಡ್ ಚಿಲ್,'' ಎಂದು ಬರೆದಿದ್ದಾರೆ.

ಕಳೆದ ವರ್ಷದ ಡಿಸೆಂಬರ್‍ನಲ್ಲಿ ಟ್ರಂಪ್ ಅವರು ಗ್ರೆಟಾ ಕುರಿತಂತೆ ಇದೇ ರೀತಿ ಟ್ವೀಟ್ ಮಾಡಿದ್ದರು. "ಎಷ್ಟೊಂದು ಹಾಸ್ಯಾಸ್ಪದ, ಗ್ರೆಟಾ ಅವರು ತಮ್ಮ ಆಕ್ರೋಶವನ್ನು ಹದ್ದುಬಸ್ತಿನಲ್ಲಿಡಲು ಯತ್ನಿಸಬೇಕು ಹಾಗೂ ನಂತರ ಸ್ನೇಹಿತರೊಬ್ಬರೊಂದಿಗೆ ಓಲ್ಡ್ ಫ್ಯಾಶನ್ಸ್ ಸಿನೆಮಾ ನೋಡಲು ತೆರಳಬೇಕು.ಚಿಲ್, ಗ್ರೆಟಾ ಚಿಲ್,''ಎಂದು ಟ್ರಂಪ್ ಬರೆದಿದ್ದರು. ಇದಕ್ಕೆ ಗ್ರೆಟಾ ಗುರುವಾರ ತಿರುಗೇಟು ನೀಡಿ ಮಾಡಿರುವ ಟ್ವೀಟ್ ಅನ್ನು 10 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News