ಅರ್ನಬ್ ಗೋಸ್ವಾಮಿಗೆ ಸಿಗದ ಜಾಮೀನು
Update: 2020-11-06 17:49 IST
ಮುಂಬೈ:ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಪ್ರಕರಣದಲ್ಲಿ ಮಹಾರಾಷ್ಟದ ಪೊಲೀಸರಿಂದ ಬಂಧಿಸಲ್ಪಟ್ಟಿರುವ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿಗೆ ಜಾಮೀನು ನೀಡಲು ಶುಕ್ರವಾರ ಬಾಂಬೆ ಹೈಕೋರ್ಟ್ ಮತ್ತೊಮ್ಮೆ ನಿರಾಕರಿಸಿತು.ಆದರೆ ರಾಜ್ಯ ಸರಕಾರ ಹಾಗೂ ಪೊಲೀಸರ ವಾದವನ್ನು ಆಲಿಸಿದ ಬಳಿಕ ಶನಿವಾರ ಈ ವಿಚಾರವನ್ನು ಮತ್ತೊಮ್ಮೆ ಪರಿಗಣಿಸುವುದಾಗಿ ಹೇಳಿದೆ.
ಅರ್ನಬ್ ಗೋಸ್ವಾಮಿ ಪರ ವಕೀಲರುಗಳಾದ ಹರೀಶ್ ಸಾಳ್ವೆ ಹಾಗೂ ಅಬಾದ್ ಪೊಂಡಾ, ಎಸ್. ಎಸ್. ಶಿಂಧೆ ಹಾಗೂ ಎಂಎಸ್ ಕಾರ್ಣಿಕ್ ಅವರಿದ್ದ ನ್ಯಾಯಪೀಠದ ಮುಂದೆ ವಾದ ಮಂಡಿಸಿದರು.
2018ರಲ್ಲಿ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಪ್ರಕರಣದಲ್ಲಿ ತನ್ನ ಬಂಧನ ಪ್ರಶ್ನಿಸಿ ಹಾಗೂ ಎಫ್ ಐಆರ್ ನ್ನು ರದ್ದುಪಡಿಸುವಂತೆ ಕೋರಿ ಗೋಸ್ವಾಮಿ ನ್ಯಾಯಾಲಯದ ಮೆಟ್ಟಿಲೇರಿದ್ದರು.