ಜಾರ್ಜಿಯಾದಲ್ಲಿ ಟ್ರಂಪ್ ವಿರುದ್ಧ ಬೈಡನ್ ಗೆ ಮುನ್ನಡೆ

Update: 2020-11-06 13:31 GMT

ವಾಷಿಂಗ್ಟನ್:  ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ದ ಜಾರ್ಜಿಯಾ ರಾಜ್ಯದಲ್ಲಿ ಶುಕ್ರವಾರ ಬೆಳಗ್ಗೆ ಅಲ್ಪ ಮುನ್ನಡೆ ಸಾಧಿಸಿದ್ದಾರೆ. ತೀವ್ರ ಸ್ಪರ್ಧೆ ಇರುವ ಇನ್ನು ಕೆಲವು ರಾಜ್ಯಗಳಲ್ಲಿ ಮತ ಎಣಿಕೆ ಮುಂದುವರಿದಿದ್ದು,ಬೈಡನ್ ಶ್ವೇತಭವನ ಪ್ರವೇಶಿಸಲು ದಾಪುಗಾಲಿಡುತ್ತಿದ್ದಾರೆ.

ಬೈಡನ್ ಜಾರ್ಜಿಯಾ ರಾಜ್ಯದಲ್ಲಿ ಜಯ ಸಾಧಿಸಿದರೆ 16 ಇಲೆಕ್ಟೋರಲ್ ಮತಗಳನ್ನು ಪಡೆಯಲಿದ್ದಾರೆ. ಅಧ್ಯಕ್ಷ ಹುದ್ದೆಗೇರಲು ಒಟ್ಟು 270 ಮತಗಳು ಬೇಕು. ಅಧ್ಯಕ್ಷರನ್ನು ನಿರ್ಧರಿಸುವ ಇಲೆಕ್ಟೋರಲ್ ಮತದಲ್ಲಿ ಬೈಡನ್ 253 ಮತ ಗಳಿಸಿದ್ದಾರೆ ಎಂದು ಹೆಚ್ಚಿನ ಪ್ರಮುಖ ಟಿವಿ ನೆಟ್ ವರ್ಕ್ ಗಳು ತಿಳಿಸಿವೆ.

77ರ ವಯಸ್ಸಿನ ಬೈಡನ್ ಸದ್ಯ ಜಾರ್ಜಿಯಾದಲ್ಲಿ ಟ್ರಂಪ್ ಗಿಂತ 917 ಮತಗಳ ಅಲ್ಪಮುನ್ನಡೆಯಲ್ಲಿದ್ದಾರೆ. ಚುನಾವಣೆಯನ್ನು ತನ್ನಿಂದ ಕಸಿಯಲಾಗುತ್ತಿದೆ ಎಂದು ಶ್ವೇತಭವನದಲ್ಲಿ ಟ್ರಂಪ್ ಮತ್ತೊಮ್ಮೆ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಜಾರ್ಜಿಯಾದಲ್ಲಿ ಬೈಡನ್ ಮುನ್ನಡೆ ಪಡೆದಿದ್ದರು.

ಜಾರ್ಜಿಯಾದಲ್ಲಿ ಟ್ರಂಪ್ ಮುನ್ನಡೆ ಕಡಿಮೆಯಾಗುತ್ತಿರುವಂತೆ ಕಂಡುಬಂದಿದೆ. ದಕ್ಷಿಣ ರಾಜ್ಯ ಜಾರ್ಜಿಯಾ 1992ರಿಂದ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿಗೆ ಮತ ಹಾಕಿಲ್ಲ. ಜಾರ್ಜಿಯಾದಲ್ಲಿ ಸುಮಾರು 14,000 ಮತಗಳ ಎಣಿಕೆಗೆ ಬಾಕಿ ಇದೆ ಎಂದು ಜಾರ್ಜಿಯಾ ಕಾರ್ಯದರ್ಶಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News