ನ.8: ಮಂಗಳೂರಿನ ವಿವಿಧೆಡೆ ವಿದ್ಯುತ್ ನಿಲುಗಡೆ
Update: 2020-11-06 21:50 IST
ಮಂಗಳೂರು, ಜ. 6: ಕಾವೂರು-ಬೈಕಂಪಾಡಿ ವಿದ್ಯುತ್ ಉಪಕೇಂದ್ರದಲ್ಲಿ ತೈಲ ಸೋರಿಕೆ ಸರಿಪಡಿಸಲು ಹಾಗೂ ನಿರ್ವಹಣಾ ಕಾಮಗಾರಿ ಹಮ್ಮಿ ಕೊಂಡಿದ್ದರಿಂದ ನ.8ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ನಿಲುಗಡೆಯಾಗಲಿದೆ.
ಇದರಿಂದ ಬೈಕಂಪಾಡಿ ಇಂಡಸ್ಟ್ರೀಯಲ್ ಏರಿಯ, ಅಂಗರಗುಂಡಿ, ಕುಡುಂಬೂರು, ಬೈಕಂಪಾಡಿ, ಕುಳಾಯಿ, ತೋಕೂರು, ವಿದ್ಯಾನಗರ, ಕಾನ, ಜನತಾ ಕಾಲೋನಿ, ಕಟ್ಲ, ಚೊಕ್ಕಬೆಟ್ಟು, ಪರಮೇಶ್ವರಿ ನಗರ, ಸುರತ್ಕಲ್, ತಡಂಬೈಲ್, ಸುಭಾಷಿತನಗರ, ಮುಕ್ಕ, ಉದಯನಗರ, ಸಸಿಹಿತ್ಲು, ಕಾಟಿಪಳ್ಳ, ಕೃಷ್ಣಾಪುರ, ಕೆಐಒಸಿಎಲ್, ಕಿಸ್ಕೋ, ಎಂಸಿಎಫ್, ಎನ್‌ಎಂಪಿಟಿ, ಯುಪಿಸಿಎಲ್, ಚೆಟ್ಟಿನಾಡು, ಬ್ರೈಟ್ ಪ್ಯಾಕೇಜ್, ರುಚಿಸೋಯ, ಕೋಸ್ಟಲ್ ಚಿಪ್‌ಬೋರ್ಡ್, ಅದಾನಿ, ಬಿಎಎಸ್‌ಎಫ್, ಎಚ್‌ಪಿಸಿಎಲ್, ಸ್ಟೀಲ್ ಬ್ಯಾರೆಲ್, ಅಂಬುಜಾ ಸಿಮೆಂಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.