ಅಮೆರಿಕ: 120 ವರ್ಷಗಳಲ್ಲೇ ಗರಿಷ್ಠ ಪ್ರಮಾಣದಲ್ಲಿ ಮತದಾನ

Update: 2020-11-06 16:21 GMT

ವಾಶಿಂಗ್ಟನ್, ನ. 6: ಅಮೆರಿಕದ 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ 120 ವರ್ಷಗಳಲ್ಲೇ ಅಧಿಕ ಪ್ರಮಾಣದಲ್ಲಿ ಮತ ಚಲಾವಣೆಯಾಗಿದೆ.

ಈ ವರ್ಷ 23.9 ಕೋಟಿ ಮತದಾರರು ಮತದಾನಕ್ಕೆ ಅರ್ಹತೆ ಹೊಂದಿದ್ದರು. ಆ ಪೈಕಿ ಸುಮಾರು 16 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಅಂದರೆ 66.9 ಶೇಕಡ ಮತದಾನವಾಗಿದೆ. ಇದು 1900ರ ಬಳಿಕ ಗರಿಷ್ಠವಾಗಿದೆ. 1900ರ ಚುನಾವಣೆಯಲ್ಲಿ 73.7 ಶೇಕಡ ಮತದಾನವಾಗಿತ್ತು ಎಂದು ಯುಎಸ್ ಇಲೆಕ್ಷನ್ ಪ್ರಾಜೆಕ್ಟ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News