ಮತ ಎಣಿಕೆ ಕೇಂದ್ರದ ಮೇಲೆ ದಾಳಿಗೆ ಪಿತೂರಿ; ಓರ್ವ ಸೆರೆ

Update: 2020-11-06 16:31 GMT

ಫಿಲಡೆಲ್ಫಿಯ (ಅಮೆರಿಕ), ನ. 6: ಪೆನ್ಸಿಲ್ವೇನಿಯ ರಾಜ್ಯದಲ್ಲಿ ಮತ ಎಣಿಕೆ ನಡೆಯುತ್ತಿರುವ ಪೆನ್ಸಿಲ್ವೇನಿಯ ಕನ್ವೆನ್ಶನ್ ಸೆಂಟರ್ ಮೇಲೆ ದಾಳಿ ನಡೆಸಲು ಪಿತೂರಿ ನಡೆಸಿದ್ದಾನೆ ಎನ್ನುವ ಆರೋಪದಲ್ಲಿ ಪೊಲೀಸರು ಗುರುವಾರ ರಾತ್ರಿ ಫಿಲಡೆಲ್ಫಿಯ ನಗರದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ಜನರ ಒಂದು ಗುಂಪು ವರ್ಜೀನಿಯದಿಂದ ಕನ್ವೆನ್ಶನ್ ಸೆಂಟರ್‌ಗೆ ಬರುತ್ತಿದೆ ಎಂಬ ಸುಳಿವಿನ ಆಧಾರದಲ್ಲಿ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ‘ನ್ಯೂಯಾರ್ಕ್ ಪೋಸ್ಟ್’ ವರದಿ ಮಾಡಿದೆ.

ಆರೋಪಿ ಪ್ರಯಾಣಿಸುತ್ತಿದ್ದ ವಾಹನದಿಂದ ಪೊಲೀಸರು ಆಯುಧವೊಂದನ್ನು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News