×
Ad

ಕಾಸರಗೋಡು : ಡಿ.14ರಂದು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ

Update: 2020-11-06 22:12 IST

ಕಾಸರಗೋಡು : ಕೇರಳದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ಘೋಷಣೆಯಾಗಿದ್ದು ಕಾಸರಗೋಡಿನಲ್ಲಿ  ಡಿಸಂಬರ್ 14 ರಂದು ಚುನಾವಣೆ ನಡೆಯಲಿದೆ.

ಡಿ.8, 10 ಮತ್ತು 14 ರಂದು ಮೂರು ಹಂತಗಳಲ್ಲಿ  ಚುನಾವಣೆ ನಡೆಯಲಿದೆ. ರಾಜ್ಯ ಚುನಾವಣಾ ಆಯುಕ್ತ ವಿ. ಭಾಸ್ಕರನ್  ಚುನಾವಣಾ ದಿನಾಂಕವನ್ನು ಘೋಷಿಸಿದರು. ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ.

ನ. 12 ರಂದು ಅಧಿಸೂಚನೆ  ಹೊರ ಬೀಳಲಿದೆ. ಕೊರೋನ ಹಿನ್ನೆಲೆಯಲ್ಲಿ ಮೂರು ಹಂತಗಳಲ್ಲಿ ಚುನಾವಣಾ ನಡೆಸಲು ಆಯೋಗ ತೀರ್ಮಾನಿಸಿದೆ. 8 ರಂದು ತಿರುವನಂತಪುರ, ಕೊಲ್ಲಂ, ಪತ್ತನಂತ್ತಿಟ್ಟ, ಆಲಪ್ಪುಯ, ಇಡುಕ್ಕಿ, ಡಿ.10ರಂದು  ಕೋಟೆಯಂ, ಎರ್ನಾಕುಲಂ, ತೃಶ್ಯೂರು, ಪಾಲಕ್ಕಾಡ್, ವಯನಾಡು ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದೆ.

ಡಿ. 14 ರಂದು ಮಲಪ್ಪುರಂ , ಕೋಜಿಕ್ಕೋಡ್ , ಕಣ್ಣೂರು , ಕಾಸರಗೋಡು ಜಿಲ್ಲೆಗಳಲ್ಲಿ  ಚುನಾವಣಾ ನಡೆಯಲಿದೆ. ಮತದಾನ ಬೆಳಗ್ಗೆ  7 ರಿಂದ ಸಂಜೆ 6 ರ  ತನಕ  ನಡೆಯಲಿದೆ. ನ.19ರ ತನಕ  ನಾಮಪತ್ರ ಸಲ್ಲಿಸಬಹುದು. ಡಿ. 20 ರಂದು  ಸೂಕ್ಷ್ಮ ಪರಿಶೀಲನೆ ನಡೆಯಲಿದೆ. ನ. 23 ನಾಮಪತ್ರ ಹಿಂತೆಗೆಯಲು ಕೊನೆ ದಿನವಾಗಿದೆ. ಡಿ.16 ರಂದು ಮತ ಎಣಿಕೆ  ನಡೆಯಲಿದೆ.

ರಾಜ್ಯದ 941 ಗ್ರಾಮ ಪಂಚಾಯತ್, 152 ಬ್ಲಾಕ್ ಪಂಚಾಯತ್ ,  87 ನಗರಸಭೆ , 6 ನಗರಪಾಲಿಕೆ   ಹಾಗೂ 14 ಜಿಲ್ಲಾ  ಪಂಚಾಯತ್ ಗೆ  ಚುನಾವಣೆ  ನಡೆಯಲಿದೆ. ಡಿಸಂಬರ್  25 ರೊಳಗೆ ನೂತನ  ಸಮಿತಿ ಅಧಿಕಾರ ಸ್ವೀಕರಿಸಲಿದೆ. ಒಂದು ಮತಗಟ್ಟೆಯಲ್ಲಿ ಒಂದು ಸಾವಿರ ಮತದಾರರ ನ್ನು ನಿಗಧಿಗೊಳಿಸಲಾಗಿದೆ. ಕೋವಿಡ್ ಮಾನದಂಡದಂತೆ ಚುನಾವಣೆ  ನಡೆಯಲಿದೆ.

ಮನೆ ಮನೆ ಪ್ರಚಾರಕ್ಕೆ  ಐದು ಮಂದಿಗೆ ಮಾತ್ರ ಅವಕಾಶ ,  ಸಾರ್ವಜನಿಕ ಸಮಾವೇಶ ಕ್ಕೆ  ಜಿಲ್ಲಾ ಮೆಜಿಸ್ಟ್ರೇಟ್ ನಿಗಧಿಗೊಳಿಸುವ ಸ್ಥಳಗಳಲ್ಲಿ ಮಾತ್ರ  ಅನುಮತಿ ಲಭಿಸಲಿದೆ. ಕೋವಿಡ್ ರೋಗಿಗಳು  ಹಾಗೂ ನಿಗಾದಲ್ಲಿರುವವ ರಿಗೆ  ಅಂಚೆ ಮತದಾನಕ್ಕೆ ಸೌಲಭ್ಯ ಕಲ್ಪಿಸಲಾಗುವುದು .
ಪ್ರತಿ  ಮತದಾರರಿಗೆ  ಗ್ಲೌ ಸ್  ನೀಡಲಾಗುವುದು. ಜ್ವರ , ಆರೋಗ್ಯ ಸಮಸ್ಯೆ ಇರುವವರಿಗೆ  ಕೊನೆಯ ಗಂಟೆಯಲ್ಲಿ ಮತದಾನಕ್ಕೆ  ಸೌಲಭ್ಯ ಕಲ್ಪಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News