ಕಾಂಚನ ಹೋಂಡಾ: ದೀಪಾವಳಿ ಫೆಸ್ಟಿವ್ ಧಮಾಕ; ಬೃಹತ್ ಸಾಲ-ವಿನಿಮಯ ಮೇಳ
ಮಂಗಳೂರು, ನ. 6: ವಾಹನ ಮಾರಾಟ ಹಾಗೂ ಸೇವೆಯಲ್ಲಿ ಅನುಭವ ಹೊಂದಿರುವ ಹಾಗೂ ಕರಾವಳಿಯಾದ್ಯಂತ ಹಲವು ವರ್ಷಗಳಿಂದ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುತ್ತಿರುವ ಕಾಂಚನ ಮೋಟಾರ್ಸ್‌ನ ಅಂಗ ಸಂಸ್ಥೆ ಕಾಂಚನ ಹೋಂಡಾವು ದ.ಕ ಜಿಲ್ಲೆಯಲ್ಲಿ ಅತೀ ಹೆಚ್ಚು ದ್ವಿಚಕ್ರ ವಾಹನ ಮಾರಾಟ ಮಾಡುವ ಡೀಲರ್ ಆಗಿದೆ.
ಕಾಂಚನ ಹೋಂಡಾದ ವಿಟ್ಲ ಶಾಖೆಯಲ್ಲಿ ನ.7ವರೆಗೆ ಬೃಹತ್ ಸಾಲ ಹಾಗೂ ವಿನಿಮಯ ಮೇಳವು ನಡೆಯುತ್ತಿದೆ. ಕಾವೂರು ಶಾಖೆಯಲ್ಲಿ ನ.9ರಿಂದ 11ರವರೆಗೆ ಈ ಮೇಳವು ನಡೆಯಲಿದೆ. ಮೇಳದಲ್ಲಿ ಗ್ರಾಹಕರು ತಮ್ಮ ಯಾವುದೇ ಹಳೇ ದ್ವಿಚಕ್ರ ವಾಹನವನ್ನು ಹೋಂಡಾ ದ್ವಿಚಕ್ರ ವಾಹನದೊಂದಿಗೆ ವಿನಿಮಯಿಸಿ ತಮ್ಮ ಹಳೇ ದ್ವಿಚಕ್ರ ವಾಹನಕ್ಕೆ ಮಾರುಕಟ್ಟೆಗಿಂತ ಹೆಚ್ಚಿನ ಮೌಲ್ಯವನ್ನು ಪಡೆಯಬಹುದು. ಗ್ರಾಹಕರು ಅತೀ ಕಡಿಮೆ ಮುಂಗಡ ಪಾವತಿ 4,444 ರೂ.ನ್ನು ಪಾವತಿಸಿ ತಮ್ಮ ನೆಚ್ಚಿನ ಹೋಂಡಾ ಸ್ಕೂಟರನ್ನು ಮನೆಗೆ ಕೊಂಡೊಯ್ಯಬಹುದು. ಅಲ್ಲದೆ, ಗ್ರಾಹಕರಿಗೆ ವಿಶೇಷ ರಿಯಾಯಿತಿಯ ಬಡ್ಡಿದರ, ಅತೀ ಕಡಿಮೆ ದಾಖಲಾತಿಗಳೊಂದಿಗೆ ಸ್ಥಳದಲ್ಲೇ ಸಾಲ ಸೌಲಭ್ಯವನ್ನು ಕಲ್ಪಿಸಿ ಕೊಡಲಾಗುವುದು.
ಹೋಂಡಾ ದ್ವಿಚಕ್ರ ವಾಹನಗಳನ್ನು ಖರೀದಿಸಿದ ಎಲ್ಲ ಗ್ರಾಹಕರಿಗೆ ಖಚಿತವಾದ ಉಡುಗೊರೆಯಾಗಿ ಹೋಂಡಾ ರೈನ್‌ಕೋಟ್/ ಹೆಲ್ಮೆಟ್/ ಜೆಬಿಎಲ್ ಇನ್ಫಿನಿಟಿ ಸ್ಪೀಕರ್, ಹೋಂಡಾ ಟಿ-ಶರ್ಟ್, 15 ಲಕ್ಷದ ರೈಡರ್ಸ್ ಇನ್ಶೂರೆನ್ಸ್‌ನ್ನು ನೀಡಲಾಗುವುದು. ಕೋವಿಡ್ ವಾರಿಯರ್ಸ್ ನವರಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುವುದು. ಬಿಎಸ್-6 ಶ್ರೇಣಿಯ ಹೋಂಡಾ ಆಕ್ವೀವಾ 6ಜಿ, ಡಿಯೋ, ಆಕ್ವೀವಾ 125, ಗ್ರಾಸಿಯ 125, ಯುನಿಕಾರ್ನ್, ಶೈನ್, ಸಿಡಿ110 ಹಾಗೂ ಎಸ್‌ಪಿ 125ಯ ವಿವಿಧ ಮೋಡೆಲ್‌ಗಳು ಶೋರೂಂನಲ್ಲಿ ಡಿಸ್‌ಪ್ಲೇಯಲ್ಲಿದ್ದು ಟೆಸ್ಟ್ ರೈಡ್‌ಗೆ ಲಭ್ಯವಿದೆ.
ಗ್ರಾಹಕರ ಆರೋಗ್ಯ ರಕ್ಷಣೆಯ ಬಗ್ಗೆ ಕೂಡಾ ಗಮನದಲ್ಲಿರಿಸಿಕೊಂಡು ಕೋವಿಡ್-19ನ್ನು ಎದುರಿಸಲು ಬೇಕಾದ ಮುಂಜಾಗ್ರತಾ ಕ್ರಮಗಳನ್ನು ನಮ್ಮ ಎಲ್ಲ ಶಾಖೆಗಳಲ್ಲಿ ಅಳವಡಿಸಿಕೊಂಡು ಕಾರ್ಯ ನಿರ್ವಹಿಸಲಾಗುತ್ತದೆ. ಗ್ರಾಹಕರು ಹೋಂಡಾ ದ್ವಿಚಕ್ರ ವಾಹನಗಳ ಆಫರ್ ಹಾಗೂ ಟೆಸ್ಟ್ ರೈಡ್‌ಗಾಗಿ ಇಂದೇ ಜಿಲ್ಲೆಯ ಮಂಗಳೂರು, ಕಾವೂರು, ತೊಕ್ಕೊಟ್ಟು, ಬಿ.ಸಿ. ರೋಡ್, ಸಿದ್ಧಕಟ್ಟೆ, ವಿಟ್ಲ ಹಾಗೂ ಮಾಣಿ ಶಾಖೆಗಳನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.