ಬೈಡನ್ ಗೆ ಅಲ್ಪ ಮುನ್ನಡೆ ಹಿನ್ನೆಲೆ: ಜಾರ್ಜಿಯಾದಲ್ಲಿ ಮರು ಎಣಿಕೆಗೆ ಆದೇಶ

Update: 2020-11-06 17:44 GMT

ನ್ಯೂಯಾರ್ಕ್: ಜಾರ್ಜಿಯಾ ರಾಜ್ಯದಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ಅಲ್ಪ ಮತಗಳಿಂದ ಮುನ್ನಡೆ ಪಡೆದಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮರು ಮತ ಎಣಿಕೆಗೆ ಆದೇಶಿಸಲಾಗಿದೆ ಎಂದು ಜಾರ್ಜಿಯಾ ರಾಜ್ಯದ ಕಾರ್ಯದರ್ಶಿ ಬ್ರಾಡ್ ರಫೆನ್ಸ್ ಪರ್ಗೆರ್ ತಿಳಿಸಿದ್ದಾರೆ.

"ಜಾರ್ಜಿಯಾದಲ್ಲಿ ಮರು ಎಣಿಕೆ ನಡೆಸಲಾಗುವುದು'' ಎಂದು ಖಚಿತಪಡಿಸಿದ ರಫೆನ್ಸ್ ಪರ್ಗೆರ್,ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವುದಾಗಿ ಭರವಸೆ ನೀಡಿದರು.

ರಾಜ್ಯದಲ್ಲಿ ಜೋ ಬೈಡನ್ ಅವರು ಡೊನಾಲ್ಡ್ ಟ್ರಂಪ್ ಗಿಂತ ಕೇವಲ 1,579 ಮತಗಳಿಂದ ಮುನ್ನಡೆಯಲ್ಲಿದ್ದಾರೆ.

ಐದು ಸಾವಿರಕ್ಕಿಂತ ಕಡಿಮೆ ಮತಗಳನ್ನು ಎಣಿಸಬೇಕಾಗಿದೆ ಎಂದು ರಾಜ್ಯದ ಮತದಾನ ವ್ಯವಸ್ಥೆ ಅನುಷ್ಠಾನ ವ್ಯವಸ್ಥಾಪಕ ಗೇಬ್ರಿಯಲ್ ಸ್ಟರ್ಲಿಂಗ್ ಶುಕ್ರವಾರ ಬೆಳಗ್ಗೆ ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News