×
Ad

ಐಪಿಎಲ್‌ನಿಂದ ಆರ್‌ಸಿಬಿ ನಿರ್ಗಮನ: ಟ್ವಿಟ್ಟರ್‌ನಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡ ಕೊಹ್ಲಿ

Update: 2020-11-07 14:46 IST

ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶುಕ್ರವಾರ ನಡೆದ ಎಲಿಮಿನೇಟರ್ ಸುತ್ತಿನಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಆರು ವಿಕೆಟ್‌ಗಳಿಂದ ಸೋತ ಬಳಿಕ ನಾಯಕ ವಿರಾಟ್ ಕೊಹ್ಲಿ ಟ್ವಿಟ್ಟರ್‌ನಲ್ಲಿ ಭಾವನಾತ್ಮಕ ಸಂದೇಶವನ್ನು ತಂಡದ ಗ್ರೂಪ್ ಫೋಟೊದೊಂದಿಗೆ ಹಂಚಿಕೊಂಡಿದ್ದಾರೆ.

ಹೈದರಾಬಾದ್ ವಿರುದ್ಧ್ದ ಸೋತಿರುವ ಆರ್‌ಸಿಬಿ ಮೊದಲ ಬಾರಿ ಐಪಿಎಲ್ ಟ್ರೋಫಿ ಗೆಲ್ಲುವ ಕನಸು ಮತ್ತೊಮ್ಮೆ ಈಡೇರಲಿಲ್ಲ. ಅತ್ಯಂತ ಶ್ರೀಮಂತ ಟ್ವೆಂಟಿ-20 ಟೂರ್ನಿಯಲ್ಲಿ ಆರ್‌ಸಿಬಿ ಮತ್ತೊಮ್ಮೆ ಮುಗ್ಗರಿಸಿದ ಬಳಿಕ ಪ್ರತಿಕ್ರಿಯಿಸಿದ ಕೊಹ್ಲಿ, ನಾವು ಅಂದುಕೊಂಡಂತೆ ನಡೆಯಲಿಲ್ಲ ಎಂದು ಒಪ್ಪಿಕೊಂಡರಲ್ಲದೆ, ನನಗೆ ಈಗಲೂ ಇಡೀ ಆರ್‌ಸಿಬಿ ತಂಡದ ಕುರಿತು ಹೆಮ್ಮೆ ಇದೆ ಎಂದರು.

"ಏರಿಳಿತದಲ್ಲಿ ಒಟ್ಟಿಗೆ ಸಾಗಿದ್ದೇವೆ. ಒಂದು ಘಟಕವಾಗಿ ಇದೊಂದು ನಮ್ಮ ಶ್ರೇಷ್ಟ ಪಯಣ. ಹೌದು, ಕೆಲವೊಂದು ವಿಷಯ ನಾವು ಯೋಚಿಸಿದಂತೆ ನಡೆಯಲಿಲ್ಲ. ಆದರೆ, ಇಡೀ ತಂಡದ ಬಗ್ಗೆ ಹೆಮ್ಮೆ ಇದೆ. ನಿಮ್ಮ ಬೆಂಬಲಕ್ಕಾಗಿ ನಮ್ಮ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳು. ನಿಮ್ಮ ಪ್ರೀತಿ ನಮ್ಮನ್ನು ಶಕ್ತಿಶಾಲಿಯನ್ನಾಗಿಸುತ್ತದೆ. ನಿಮ್ಮ್ಮೆಲ್ಲರನ್ನೂ ಶೀಘ್ರವೇ ನೋಡುವೆ'' ಎಂದು ವಿರಾಟ್ ಕೊಹ್ಲಿ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News