×
Ad

ನ.9ರಂದು ಉಡುಪಿಯಲ್ಲಿ ಹೊಸತನದೊಂದಿಗೆ ‘ಬ್ರೈಡಲ್ ವರ್ಲ್ಡ್’ ಬಟ್ಟೆ ಮಳಿಗೆ ಉದ್ಘಾಟನೆ

Update: 2020-11-07 15:42 IST

ಉಡುಪಿ, ನ.7: ನಗರದ ಹೃದಯಭಾಗದಲ್ಲಿರುವ ಸಿಟಿಬಸ್ ನಿಲ್ದಾಣ ಸಮೀಪದ ಮಸೀದಿ ರಸ್ತೆಯ ಅಕ್ಷಯ ಟವರ್‌ನಲ್ಲಿ ಹೊಸತನದೊಂದಿಗೆ ಪುನಾರಂಭಗೊಂಡ ಬಟ್ಟೆ ಮಳಿಗೆ ‘ಬ್ರೈಡಲ್ ವರ್ಲ್ಡ್’ ದ ಡಿಸೈನರ್ ಶಾಪ್ ಇದರ ಉದ್ಘಾಟನೆ ನ.9ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.

ಉಡುಪಿ ಜಾಮಿಯ ಮಸೀದಿಯ ಇಮಾಮ್ ವೌಲಾನ ರಶೀದ್ ಅಹ್ಮದ್ ನದ್ವಿ ದುಆ ನೆರವೇರಿಸಲಿರುವರು. ಮುಖ್ಯ ಅತಿಥಿಗಳಾಗಿ ಫೋರ್ಟ್ ಗೇಟ್ ಏಜ್ಯುಕೇಶನ್ ಟ್ರಸ್ಟ್‌ನ ಚೆಯರ್‌ಮ್ಯಾನ್ ಅಭಿನಂದನ್ ಶೆಟ್ಟಿ, ಮ್ಯಾನೇಜಿಂಗ್ ಟ್ರಸ್ಟಿ ನೀತಾ ಶೆಟ್ಟಿ, ಉಡುಪಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಪ್ರಬಂಧಕ ಗುರುರಾಜ್ ಹೊನ್ನುನಸಿ, ಕರ್ಣಾಟಕ ಬ್ಯಾಂಕ್ ಆದಿಉಡುಪಿ ಶಾಖೆಯ ಪ್ರಬಂಧಕ ರಾಘವೇಂದ್ರ ಹೆಬ್ಬಾರ್, ವಿದ್ಯಾ ಸರಸ್ವತಿ ಭಾಗವಹಿಸಲಿರುವರು.

ಕಳೆದ 13 ವರ್ಷಗಳಿಂದ ಉಡುಪಿ ಹಾಗೂ ಕುಂದಾಪುರದಲ್ಲಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ ನೀಡುತ್ತಿರುವ ಬ್ರೈಡಲ್ ವರ್ಲ್ಡ್, ಉಡುಪಿಯಲ್ಲಿ ಇದೀಗ ಆಕರ್ಷಕ ಮಳಿಗೆಯೊಂದಿಗೆ ಇನ್ನಷ್ಟು ಸೇವೆ ನೀಡಲು ಸಜ್ಜಾಗಿದೆ. ನೆಲ ಮತ್ತು ಮೊದಲ ಮಹಡಿಯಲ್ಲಿ ಒಟ್ಟು 4,500 ಚದರ ಅಡಿ ವಿಸ್ತ್ರೀರ್ಣವನ್ನು ಹೊಂದಿರುವ ವಿಶಾಲ ಮಳಿಗೆ ಇದಾಗಿದೆ.

ಮಹಿಳೆಯರ, ಮಕ್ಕಳ ಅಪೂರ್ವ, ನವನವೀನ ಶೈಲಿಯ ಉಡುಪುಗಳ ಸಂಗ್ರಹ ಹೊಂದಿರುವ ಬ್ರೈಡಲ್ ವರ್ಲ್ಡ್‌ನಲ್ಲಿ ‘ರೀಹಾ ಫ್ಯಾಶನ್’ ಹಾಗೂ ‘ಬೇಬಿ ವರ್ಲ್ಡ್’ ಎಂಬ ಪ್ರತ್ಯೇಕ ವಿಭಾಗವನ್ನು ತೆರೆಯಲಾಗಿದೆ. ಇಲ್ಲಿ ಸಾರಿ, ಸಲ್ವಾರ್, ಕುರ್ತಿಸ್, ಸಲ್ವಾರ್ ಮೆಟೀರಿಯಲ್ಸ್, ಗೌನ್, ಜಿಟಿಎಸ್ ಶರ್ಟ್ಸ್, ಪ್ಯಾಂಟ್, ಕಿಡ್ಸ್ ಫ್ರಾಕ್, ಗೌನ್, ಕಿಡ್ಸ್ ಟಾಯ್ಸ್, ಅಭಯ ಲಭ್ಯ ಇದೆ.

ಅತ್ಯುತ್ತಮ ದರ್ಜೆಯ ಹಾಗೂ ಗುಣಮಟ್ಟದ ಸಿದ್ಧ ಉಡುಪುಗಳ ಸಂಗ್ರಹ ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರೊಂದಿಗೆ ಮನೆಮಾತನಾಗಿರುವ ಬ್ರೈಡಲ್ ವರ್ಲ್ಡ್‌ನಲ್ಲಿ, ಮದುವೆಗೆ ಸಂಬಂಧಿಸಿದ ಹೊಸ ಡಿಸೈನ್‌ಗಳ ಬಟ್ಟೆಗಳು, ಮಹಿಳೆಯರ ಬೇಡಿಕೆಗೆ ಅನುಗುಣವಾಗಿ ಹಾಗೂ ಅಭಿರುಚಿಗೆ ತಕ್ಕಂತೆ ಹೊಸ ಮಾದರಿಯ ಉಡುಪುಗಳು ಕೂಡ ಲಭ್ಯ ಇವೆ. ಬ್ರೈಡಲ್ ವರ್ಲ್ಡ್ ಇದರ ಶಾಖೆಯು ಕುಂದಾಪುರದಲ್ಲಿಯೂ ಉತ್ತಮವಾಗಿ ಕಾರ್ಯಾಚರಿಸುತ್ತಿದೆ ಎಂದು ಬ್ರೈಡಲ್ ವರ್ಲ್ಡ್‌ನ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News